LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾನು ರೈತರ ಪರ, ಮಂಡ್ಯದವಳು – ಅಖಂಡ ಕರ್ನಾಟಕ ಬಂದ್‌ಗೆ ನಟಿ ರಮ್ಯಾ ಬೆಂಬಲ

Advertisement
Advertisement

ಬೆಂಗಳೂರು: ಆಗಸ್ಟ್ 13ರ ಅಖಂಡ ಕರ್ನಾಟಕ ಬಂದ್‌ಗೆ  ನಟಿ ರಮ್ಯಾ  ಸಾಥ್ ನೀಡಿದ್ದಾರೆ. ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದಾರೆ.

ಕಾವೇರಿ ನೀರಿನ ಹೋರಾಟ ತೀವ್ರಗೊಳ್ಳುತ್ತಿರುವ ನಡುವೆಯೇ, ಕಾವೇರಿ ಕೊಳ್ಳದಲ್ಲಿ ಮಳೆಯಾಗುತ್ತಿದೆ. ಅದಾಗ್ಯೂ ಆಗಸ್ಟ್ 13ರಂದು ಕರೆ ನೀಡಲಾಗಿರುವ ಅಖಂಡ ಕರ್ನಾಟಕ ಬಂದ್‌ಗೆ ನಟಿ ರಮ್ಯಾ ಬೆಂಬಲ ಘೋಷಿಸಿದ್ದಾರೆ. ನಾನು ಮಂಡ್ಯದವಳು. ಕಾವೇರಿ ವಿಚಾರ ಬಂದಾಗ ರೈತರ ಪರವಾಗಿ ನಿಲ್ಲುವುದು ನನ್ನ ಜವಾಬ್ದಾರಿ. ನನ್ನ ಬೆಂಬಲ ಖಂಡಿತ ಇರುತ್ತದೆ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ. 

ಕಾವೇರಿ ವಿಚಾರವಾಗಿ ಈ ಹಿಂದೆಯೂ ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಕಾವೇರಿ ನೀರಿನ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಚರ್ಚೆಯಾಗುತ್ತಿದ್ದಾಗಲೂ ಅಲ್ಲಿದ್ದೆ ಎಂದು ರಮ್ಯಾ ಹೇಳಿದ್ದಾರೆ. ರೈತರ ಹಿತದ ಪ್ರಶ್ನೆ ಬಂದಾಗ ಯಾವುದೇ ಹಿಂಜರಿಕೆಯಿಲ್ಲದೆ ಬೆಂಬಲ ನೀಡುತ್ತೇನೆ. ಇದನ್ನು ಮತ್ತೆ ಹೇಳಬೇಕಾದ ಅಗತ್ಯವೇ ಇಲ್ಲ. ನಾನು ಯಾವಾಗಲೂ ರೈತರ ಪರವಾಗಿಯೇ ಇರುತ್ತೇನೆ ಎಂದಿದ್ದಾರೆ. ಕಾವೇರಿ ವಿಚಾರ ಮತ್ತೆ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಯ ಕೇಂದ್ರವಾಗಿರುವ ಬೆನ್ನಲ್ಲೇ, ನಟಿ ರಮ್ಯಾ ಅವರ ಈ ಹೇಳಿಕೆ ಹೋರಾಟಕ್ಕೆ ಮತ್ತಷ್ಟು ಬಲ ನೀಡುವ ಸಾಧ್ಯತೆ ಮೂಡಿಸಿದೆ. 

ಆಗಸ್ಟ್ 13ಕ್ಕೆ ಬಂದ್ ನಡೆದರೆ ನಟಿ ರಮ್ಯಾ ಬೀದಿಗಿಳಿದು ಕಾವೇರಿ ಪರ ಹೋರಾಟ ಮಾಡುತ್ತಾರಾ? ಕೇವಲ ಬೆಂಬಲ ನೀಡುತ್ತಾರಾ ಅಂತ ಕಾದು ನೋಡಬೇಕಿದೆ. ರಮ್ಯಾರ ಬೆಂಬಲವನ್ನ ಕನ್ನಡಪರ ಹೋರಾಟಗಾರರು ಸ್ವಾಗತಿಸಿದ್ದು, ಬಂದ್‌ಗೆ ಮತ್ತಷ್ಟು ಬಲ ಸಿಕ್ಕಿದೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಮೆ ಇಲ್ಲದ ವಾಹನಗಳಿಗೆ ಇನ್ಮುಂದೆ ಪೆಟ್ರೋಲ್‌ ಸಿಗಲ್ಲ?ನಾನು ರೈತರ ಪರ, ಮಂಡ್ಯದವಳು – ಅಖಂಡ ಕರ್ನಾಟಕ ಬಂದ್‌ಗೆ ನಟಿ ರಮ್ಯಾ ಬೆಂಬಲ 16ನೇ ದಕ್ಷಿಣ ಏಷ್ಯನ್ ಚಾಂಪಿಯನ್‌ಶಿಪ್ – 2026 ವಿಜೇತ ಕ್ರೀಡಾಪಟುಗಳ ಸನ್ಮಾನ ಸಮಾರಂಭ ಸ್ನೇಹಿತನ ಬರ್ತ್‌ಡೇ ಮುಗಿಸಿ ಬರುತ್ತಿದ್ದಾಗ ಕಾರು ಪಲ್ಟಿ – ಇಬ್ಬರು ದುರ್ಮರಣ, ಮೂವರು ಗಂಭೀರ ಸುಬ್ಬಾರೆಡ್ಡಿಗೆ ಕೈತಪ್ಪಿದ ಸಚಿವ ಸ್ಥಾನ – ಬೆಂಬಲಿಗರಿಂದ ಬಾಗೇಪಲ್ಲಿ ಬಂದ್, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆಸಚಿವ ಬಿ. ನಾಗೇಂದ್ರಗೆ ಬಿಗ್‌ ಶಾಕ್‌ – ದೆಹಲಿಗೆ ತೆರಳಲು ಸಲ್ಲಿಸಿದ್ದ ಅರ್ಜಿ ವಜಾKPSC ಹಗರಣ CBI ತನಿಖೆಗೆ ಆಗ್ರಹಿಸಿ ಆ.5 ರಿಂದ ABVP ಅನಿರ್ದಿಷ್ಟಾವಧಿ ಧರಣಿಮಹಿಳೆಯರ ಮೆನೋಪಾಸ್ ಸಮಸ್ಯೆಗೆ ರಾಜ್ಯ ಸರ್ಕಾರ ವಿಶೇಷ ನೀತಿ – ನಟಿ ರಮ್ಯಾ ಬ್ರ್ಯಾಂಡ್ ಅಂಬಾಸಿಡರ್ಪ್ರಾಥಮಿಕ ಅಂಕಿ ಅಂಶಗಳಿಲ್ಲದೆ ಸಭೆಗೆ ಏಕೆ ಬರ್ತೀರಿ? – ಜಿಬಿಎ ಎಂಜಿನಿಯರ್‌ಗಳಿಗೆ ಕೃಷ್ಣ ಬೈರೇಗೌಡ ಕ್ಲಾಸ್ಕೃಷಿ ಅಧಿಕಾರಿಗಳ ನೇಮಕಾತಿ ಗೊಂದಲ – ಪ್ರತಿಭಟನಾ ನಿರತ ಜಿಕೆವಿಕೆ ವಿದ್ಯಾರ್ಥಿಗಳ ಸಮಸ್ಯೆ ಖುದ್ದು ಆಲಿಸಿದ ಡಿಕೆಶಿ