LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕುಮಾರಸ್ವಾಮಿಗೆ ಗುಂಡಿಗೆ ಇದ್ದರೆ ನನ್ನ ಜತೆ ಚರ್ಚೆಗೆ ಬರಲಿ – ಚೆಲುವರಾಯಸ್ವಾಮಿ ಸವಾಲ್

Advertisement
Advertisement
Advertisement

ಬೆಂಗಳೂರು: ಕುಮಾರಸ್ವಾಮಿಗೆ  ಗುಂಡಿಗೆ ಇದ್ದರೆ ಯಾರ ಮನೆ ಬಾಗಿಲು ಯಾರು ತಟ್ಟಿದರು ಅಂತ ಚರ್ಚೆಗೆ ನನ್ನ ಜೊತೆ ಬರಲು ಅಂತ ಸಚಿವ ಚೆಲುವರಾಯಸ್ವಾಮಿ ಸವಾಲ್ ಹಾಕಿದ್ದಾರೆ.

ರಾತ್ರಿ 9 ಗಂಟೆಗೆ ಹೋಗಿ ಯಾರ ಮನೆ ಬಾಗಿಲು ಬಡಿದರು ಎಂಬ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿಗೆ ಗುಂಡಿಗೆ ಇದ್ದರೆ ನನ್ನ ಜತೆ ಕುಮಾರಸ್ವಾಮಿ ಚರ್ಚೆಗೆ ಬರಲಿ. ಸಿಎಂ ಆಗಿದ್ದಾಗ ಕುಮಾರಸ್ವಾಮಿ ಎರಡು ದಿನ ಎಲ್ಲಿಗೆ ಹೋಗಿದ್ರು? ಆಗ ಅವರ ತಂದೆ ದೇವೇಗೌಡರು ಅಧಿವೇಶನ ಪ್ರಾರಂಭ ಆಗೋ ಮುನ್ನ 10 ಗಂಟೆ ಒಳಗೆ ಕರೆದುಕೊಂಡು ಬಾ ಅಂತ ನನಗೆ ಟಾಸ್ಕ್ ಕೊಟ್ಟಿದ್ದರು. ಎಲ್ಲಿಗೆ ಹೋಗಿದ್ರು ಕುಮಾರಸ್ವಾಮಿ? ಅವರ ಬಾಗಿಲು ತಟ್ಟಿದ್ದು ನಾನು. ಅದು ತಪ್ಪು ಅಂದರೆ ಕುಮಾರಸ್ವಾಮಿ ಮಾತಾಡಲಿ. ಎರಡು ದಿನ ಕುಮಾರಸ್ವಾಮಿ ಎಲ್ಲಿ ಕಾಣೆ ಆಗಿದ್ದರು? ಅಂತ ಆರೋಪ ಮಾಡಿದರು.

ನನ್ನ ಬಗ್ಗೆ ಮಾತಾಡೋಕೆ ಕುಮಾರಸ್ವಾಮಿ ಅವರಿಗೆ ಏನು ಇಲ್ಲ. ಅವರ ಬಗ್ಗೆ ಮಾತಾಡೋಕೆ ಸಾವಿರ ಇದೆ‌. ಅವರಿಗೆ ಧೈರ್ಯ ಇದ್ದರೆ ವಿಧಾನಸೌಧ ಅಥವಾ ಅವರ ಹೇಳೋ ಟಿವಿ ಚಾನಲ್‌ನಲ್ಲಿ ಚರ್ಚೆಗೆ ಬರಲಿ ಅಂತ ಕುಮಾರಸ್ವಾಮಿ ಚೆಲುವರಾಯಸ್ವಾಮಿ ಸವಾಲ್ ಹಾಕಿದ್ದಾರೆ.

ನಾನು ದೆಹಲಿಗೆ ಹೋಗಿದ್ದು ನೀರಾವರಿ ಯೋಜನೆ, ಕುಡಿಯೋ ನೀರಿನ ಬಗ್ಗೆ ಜಲಶಕ್ತಿ ಸಚಿವರು ಸಭೆ ಮಾಡಿದ್ರು ಅದಕ್ಕೆ ಹೋಗಿದ್ದೆ. ಅ ಸಭೆಯನ್ನ ಪ್ರಧಾನಿಗಳು ಅಡ್ರೆಸ್ ಮಾಡಿದ್ರು. ಈ ವಿಷಯ ಕ್ಯಾಬಿನೆಟ್ ಮಂತ್ರಿಗಳಿಗೆ ಗೊತ್ತಿಲ್ಲ. ವಾರಕ್ಕೆ ಮೂರು ದಿನ ಅವರು ರಾಜ್ಯದಲ್ಲಿ ಇರ್ತಾರೆ. ನೀರು ಬಿಡೋಕೆ ದೆಹಲಿಗೆ ಹೋಗಿಲ್ಲ‌ ನಾನು‌. ಅವರು ಸಿಎಂ ಆಗಿದ್ದಾಗ ದೆಹಲಿಯಲ್ಲಿ ನೀರು ಬಿಡಿಸುತ್ತಿದ್ದರು ಅನ್ನಿಸುತ್ತೆ ಅದಕ್ಕೆ ಹಾಗೆ ಮಾತಾಡ್ತಾರೆ. ಮಾಜಿ ಸಿಎಂ ಆದವರು ಮಾತಾಡೋದು ಹೀಗ ಅಂತ ಕಿಡಿಕಾರಿದರು.

ಅವರಿಗೆ ಉತ್ತರ ಕೊಡಲು ಅಸಹ್ಯ ಆಗುತ್ತದೆ.‌ ಮೇಕೆದಾಟು, ಮಹದಾಯಿ ಸೇರಿ ಹಲವು ವಿಷಯ ಮಾತಾಡೋಕೆ ಹೋಗಿದ್ದು. ಪ್ರಧಾನಿಗಳು ಮಾತಾಡಿದ್ರು. ಇದು ಮಹತ್ವದ ಸಭೆ‌. ಎಫೆಕ್ಟ್ ಆಗಿ ಸಭೆ ಆಗಿದೆ‌. ಮಹಾದಾಯಿ ವಿಚಾರ ಕೇಂದ್ರ ಸಚಿವ ಜೋಷಿ ಅವರನ್ನು ಮುಂದಿನ ವಾರ ಭೇಟಿ ಆಗ್ತೀನಿ. ಅರಣ್ಯ ಇಲಾಖೆ ಕ್ಲಿಯರ್ ಬೇಗ ಆಗೋ ಸಾಧ್ಯತೆ ಇದೆ‌.ಮೇಕೆದಾಟು ಸೆಂಟ್ರಲ್ ವಾಟರ್ ಬೋರ್ಡ್‌ ಅಧ್ಯಕ್ಷರ ಜೊತೆ ನಾವು ಮಾತಾಡಿದ್ದೇವೆ. ತಮಿಳುನಾಡಿಗೂ ನಮಗೆ ಗೊಂದಲ ಇಲ್ಲ. ತಮಿಳುನಾಡಿಗೆ ಅನುಕೂಲ ಅಗುತ್ತದೆ ಅಂತ ಇದೆಲ್ಲವನ್ನು ಹೇಳಿದ್ದೇವೆ. ಎರಡು ರಾಜ್ಯಗಳ ಪ್ರತಿಷ್ಠೆ ಇಲ್ಲ ಅಂತ ಹೇಳಿದ್ದೇವೆ. ಅಧ್ಯಕ್ಷರಿಗೆ ಮನವರಿಗೆ ಮಾಡಿದ್ದೇವೆ. ಆದಷ್ಟು ಬೇಗ ಕ್ಲಿಯರ್ ಮಾಡ್ತೀವಿ ಅಂತ ಹೇಳಿದ್ದಾರೆ ಅಂತ ತಿಳಿಸಿದರು.

ರಾತ್ರಿ ಯಾರ ಮನೆ ಬಾಗಿಲು ಬಡಿಯೋಕೆ ಹೋಗಿದ್ರು ಅಂತಾರೆ. ಗೌರವವಾಗಿ ಕುಮಾರಸ್ವಾಮಿ ಮಾತಾಡಿಲಿ. ನಾಲಿಗೆ ಹಿಡತ ಹಿಡಿದು ಮಾತಾಡಲಿ. ಬಾಯಿಗೆ ಬಂದ ಹಾಗೆ ಮಾತಾಡಿದ್ರೆ ನಾನು ಮಾತಾಡಬೇಕಾಗುತ್ತದೆ. ದೆಹಲಿಗೆ ನೀರು ಬಿಡೋಕೆ ಹೋಗ್ತಾರಾ. ಯಾವ ವಿಚಾರ ಎಲ್ಲಿ ಮಾತಾಡಬೇಕು ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದ ಮಂತ್ರಿ ಆಗಿ ಮಂತ್ರಿ ಕೆಲಸ ಮಾಡಲಿ. ಅದನ್ನ ಬಿಟ್ಟು ಕರ್ನಾಟಕದಲ್ಲಿ ಪ್ರೆಸ್ ಮೀಟ್ ಮಾಡಿ ಟೀಕೆ ಮಾಡ್ತಾರೆ. ಕುಮಾರಸ್ವಾಮಿಗೆ ಡಿಕೆಶಿ ಸಿಎಂ ಆಗಿದ್ದು ತಡೆಯೋಕೆ ಆಗೊಲ್ಲ. ಅವರಿಗೆ ಹೊಟ್ಟೆ ನೋವು ಇದ್ದರೆ ನಾವು ಔಷಧಿ ಕೊಡೋಕೆ ಆಗೊಲ್ಲ. ಯಾರ್ ಯಾರ್ ಟೈಂ ನೀರು ಬಿಟ್ಟಿದ್ದಾರೆ ಅಂತ ದಾಖಲಾತಿ ಬಿಡು ಅಂದರೆ ಬಿಡ್ತೀವಿ. ಕುಮಾರಸ್ವಾಮಿ, ದೇವೇಗೌಡರ ಅವಧಿಯಲ್ಲಿ ಎಷ್ಟು ನೀರು ಬಿಡಲಾಗಿತ್ತು ದಾಖಲೆ ಕೊಡ್ತೀನಿ ಅಂತ ಸವಾಲ್ ಹಾಕಿದ್ರು.

ನಾವು ಸರಿಯಾಗಿ ಸುಪ್ರೀಂಕೋರ್ಟ್, CWRC ಮುಂದೆ ವಾದ ಮಾಡಿಯೇ ಇಷ್ಟು ನೀರು ಉಳಿದಿರೋದು. ನಮ್ಮ ರೈತರ ಪರವಾಗಿ ಕೆಲಸ ಮಾಡ್ತಾ ಇದ್ದೇವೆ‌. ಎಲ್ಲಾ ಸರ್ಕಾರದಲ್ಲಿ ಈ ವ್ಯವಸ್ಥೆ ಇದೆ. ಬಾಗಿಲು ತಟ್ಟೋಕೆ ಶುರು ಮಾಡಿದ್ದು ನಾನು ಹೇಳೋಕೆ ಶುರು ಮಾಡಿದ್ರೆ ತಡೆದುಕೊಳ್ಳೋಕೆ ಆದ್ರೆ‌ ಮಾತಾಡಿ. ಅವರಿಗೆ ತಡೆದುಕೊಳ್ಳೋ ಶಕ್ತಿ ಇದ್ದರೆ‌ ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಲಿ ಅಂತ ಸವಾಲ್ ಹಾಕಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ಬಿಗ್ ರಿಲೀಫ್ – ಅಮಾನತು ಆದೇಶಕ್ಕೆ ತಡೆಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಉದ್ಯಾನ ಭೂಮಿ ಬಳಕೆ ಮಸೂದೆ ಹಿಂಪಡೆದ ಸರ್ಕಾರಭ್ರಷ್ಟರನ್ನು ನೇಮಿಸಿ ಒಳ್ಳೆಯ ಆಡಳಿತ ನೀಡಲು ಸಾಧ್ಯಾನಾ? – ಶಿವಶಂಕರಪ್ಪ ಸಾಹುಕಾರ್‌ಗೆ ಹೈಕೋರ್ಟ್‌ ಛೀಮಾರಿಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ – ಶಾಸಕ ಸುರೇಶ್‌ಗೌಡ ಪುತ್ರಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಸೆ.21ರಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನಕೆಎಂಎಫ್ ನಂದಿನಿ ಹಾಲಿನ ಟ್ಯಾಂಕರ್ ಪಲ್ಟಿ – 14 ಸಾವಿರ ಲೀಟರ್ ಹಾಲು ರಸ್ತೆಪಾಲುಅಂತಾರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷ ಜನಾರ್ದನ ರೆಡ್ಡಿ, ಉಪಾಧ್ಯಕ್ಷ ಶ್ರೀರಾಮುಲು: ಪ್ರದೀಪ್ ಈಶ್ವರ್ಕಾಂಗ್ರೆಸ್ ಶಾಸಕನಿಂದ ಕಮೀಷನ್ ಆರೋಪ ವಿಚಾರ ತನಿಖೆ ಆಗಲಿ: ಯು‌.ಟಿ. ಖಾದರ್ಕೋಲಾರದ ಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಣ ಹೋಮ – ವಿಷ ಪ್ರಾಶನ ಶಂಕೆಭಾರತದ ಜಿಡಿಪಿ 7.8% ಬೆಳವಣಿಗೆ ಅನ್ನೋದೆ ಬೋಗಸ್: ಸಂತೋಷ್ ಲಾಡ್