LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮದರಸಾ ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ – ಶಾಲೆಗೆ ನುಗ್ಗಿ ದಾಂಧಲೆ

Advertisement
Advertisement

ಬೆಂಗಳೂರು: ಮದರಸಾ ಜಾಗದ ವಿಚಾರಕ್ಕೆ ಶಾಲೆಗೆ ನುಗ್ಗಿ ಪುಂಡರು ದಾಂಧಲೆ ನಡೆಸಿರುವ ಘಟನೆ ಬೆಂಗಳೂರಿನ  ಥಣಿಸಂದ್ರದ  ನಾರಾಯಣಪುರದಲ್ಲಿ ನಡೆದಿದೆ.

ಸಾಮರ್ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ನುಗ್ಗಿದ ಕೆಲವರು, ಕಿಟಕಿ ಗಾಜುಗಳನ್ನು ಒಡೆದು ಒಳನುಗ್ಗೋಕೆ ಪ್ರಯತ್ನಿಸಿದ್ದಾರೆ. ಈ ವೇಳೆ ಒಳಗಿದ್ದ ಕೆಲ ವಿದ್ಯಾರ್ಥಿಗಳು, ಸಿಬ್ಬಂದಿ ಖಾರದ ಪುಡಿ ಬೆರಸಿದ ನೀರು ಎರಚಿ ಅವರನ್ನು ಹಿಮ್ಮೆಟ್ಟಿಸೋ ಕೆಲಸ ಮಾಡಿದ್ದಾರೆ. ನೋಡು ನೋಡುತ್ತಿದ್ದಂತೆ ಇಡೀ ಕಾಲೇಜು ರಣರಂಗವಾಗಿ ಮಾರ್ಪಟ್ಟಿದೆ. 

ಮಸೀ ಅಹಮದ್ ಎಂಬುವವರು 1988ರಲ್ಲಿ ಮದರಸಾಗೆ ಹತ್ತು ಗುಂಟೆ ಜಮೀನು ದಾನವಾಗಿ ಕೊಟ್ಟಿದ್ದರು. ಆ ಜಾಗದಲ್ಲಿ ಖಲೀದ್ ಮುಶ್ರಫ್ ಎಂಬುವವರು ಮದರಸಾ ಮಾಡಿಕೊಂಡು ಅಕ್ಕಪಕ್ಕದ ಐದು ಎಕರೆ ಜಾಗದಲ್ಲಿ ಶಾಲೆ, ಕಾಲೇಜು ನಿರ್ಮಿಸಿ ಕಳೆದ ನಲವತ್ತು ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ.

ಇದೀಗ ಮೂಲ ಮಾಲೀಕ, ಮಸೀ ಅಹಮದ್ ಮಕ್ಕಳು, ಮೊಮ್ಮಕ್ಕಳು ಕೇಸು ದಾಖಲಿಸಿದ್ದು, ಕೇವಲ ಹತ್ತು ಗುಂಟೆ ಜಮೀನು ದಾನವಾಗಿ ಕೊಟ್ಟಿದ್ದೇವೆ. ಆದರೆ ಮದರಸಾದವರು ಅಕ್ರಮವಾಗಿ ಪಕ್ಕದ ಐದು ಎಕರೆ ಜಾಗವನ್ನು ಕಬಳಿಸಿಕೊಂಡಿದ್ದಾರೆ ಅಂತಾ ಆರೋಪಿಸಿದ್ದಾರೆ. ಈ ವಿಚಾರ, ಹೈಕೋರ್ಟ್ನಲ್ಲಿದ್ದು, ಯಥಾಸ್ಥಿತಿ ಕಾಪಾಡುವಂತೆ ಸೂಚಿಸಲಾಗಿದೆ. ಆದರೂ ಇಬ್ಬರ ಕಡೆಯವರಿಂದ ಆಗಾಗ ಗಲಾಟೆಗಳು ನಡೆಯುತ್ತಿವೆ. ಇನ್ನೂ ಈ ಗಲಾಟೆ ಸಂಬಂಧ, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸ್ಕೂಲ್ ಮಾಲೀಕ ಖಲೀದ್ ಮುಶ್ರಫ್ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಯಾಸೀನ್, ಅಮೀನ್, ಅಕ್ಬರ್, ಇನಾಯಿತ್, ಸುಲ್ತಾನ್, ಹೀಮದ್ ಪಾಷ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಳೆದ ನಲವತ್ತು ವರ್ಷದಿಂದ ಇಲ್ಲಿ ಶಾಲೆ ನಡೆಸಲಾಗುತ್ತಿದೆ. ಜು.14ರ ತಡರಾತ್ರಿ ಏಕಾಏಕಿ ನುಗ್ಗಿ ಕೆಲವರು ಅತಿಕ್ರಮಣ ಪ್ರವೇಶ ಮಾಡಿ ಹಲ್ಲೆ, ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಂದು ತಿಂಗಳೊಳಗೆ ಭಾರತ್‌ ಜೋಡೋ ಯುವ ಸಂಘಗಳು ಅಸ್ತಿತ್ವಕ್ಕೆ: ಪರಮೇಶ್ವರ್‌ರಾಜಕೀಯ ಬೇರೆ, ಕೆಲಸ ಬೇರೆ – ಕೃಷ್ಣ ಬೈರೇಗೌಡ ಕಾರ್ಯವೈಖರಿಗೆ ಹೆಚ್‌ಡಿಡಿ ಶ್ಲಾಘನೆಉತ್ತರ ಕರ್ನಾಟಕದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ – ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆಬಿಡದಿ ಟೌನ್‌ಶಿಪ್ ಹೋರಾಟಗಾರರ ಮೇಲಿನ FIR ವಾಪಸ್ ಪಡೆಯಬೇಕು: ನಿಖಿಲ್ ಆಗ್ರಹಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ AI ವಿವಿ ಸ್ಥಾಪನೆ: ಡಿಕೆಶಿಸುಪ್ರೀಂನಲ್ಲಿ ಲಾಲೂಗೆ ಬಿಗ್‌ ರಿಲೀಫ್‌ – ಸಿಬಿಐ ಅರ್ಜಿ ವಜಾ50 ಲಕ್ಷಕ್ಕಾಗಿ ಪತ್ನಿ, ಮಾವನ ಮೇಲೆ ಹಲ್ಲೆಗೆ ಯತ್ನ – PSIಗೆ ಪರಸ್ತ್ರೀ ವ್ಯಾಮೋಹ, ಕಾಮಪುರಾಣ ಬಯಲುಸಿದ್ದರಾಮಯ್ಯ ಇಳಿಸಲು ಹೈಕಮಾಂಡ್‌ಗೆ ಕೊಟ್ಟ ಭರವಸೆಯಂತೆ ಟೌನ್‌ಶಿಪ್‌ – ಡಿಕೆಶಿ ವಿರುದ್ಧ ಹೆಚ್‌ಡಿಡಿ ಸ್ಫೋಟಕ ಆರೋಪಕಲಾದಗಿಗೆ ಮೋಹನ್ ಭಾಗವತ್ ಭೇಟಿ- ಯುವ ಕಾರ್ಯಕರ್ತನ ಮನೆಯಲ್ಲಿ ಚಹಾ ಸೇವನೆCWMA ಸಭೆ ಬಳಿಕ ನಾಲೆಗಳಿಗೆ ನೀರು; ಈ ವಿಚಾರದಲ್ಲಿ ರಾಜಕೀಯ ಬೇಡ: ಚಲುವರಾಯಸ್ವಾಮಿ