ಬೀದರ್ : ಕಾಲೇಜು ವಾಹನ ಮತ್ತು ಆಟೋ ನಡುವೆ ಭೀಕರ ರಸ್ತೆ ಅಪಘಾತವಾಗಿ ಆಟೋ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ತಾಲೂಕಿನ ಕೊಳ್ಳಾರ ಕೆ ಗ್ರಾಮದ ಬಳಿ ನಡೆದಿದೆ.
28 ವರ್ಷದ ಆನಂದ ಸಾವನ್ನಪ್ಪಿದ ದುರ್ದೈವಿ. ಹುಮ್ನಾಬಾದ್‌ನಿಂದ ಖಾಸಗಿ ಕಾಲೇಜು ವಾಹನ ಬೀದರ್ ಕಡೆ ಬರುತ್ತಿದ್ದಾಗ ಆಟೋಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಕಾಲೇಜು ವಾಹನ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಸಾವನ್ನಪ್ಪಿದ ಆಟೋ ಸವಾರನನ್ನು ಬ್ರೀಮ್ಸ್ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಈ ಕುರಿತು ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಕೆ ಕೈಗೊಂಡಿದ್ದಾರೆ.
