LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಾನಪದ ವಿಶ್ವವಿದ್ಯಾಲಯದಲ್ಲಿ ಅನುಮತಿ ಇಲ್ಲದೆ ಹೊಸ ಪಠ್ಯಕ್ರಮ; 8 ಕೋರ್ಸ್‌ಗಳು ರದ್ದು

Advertisement

ಹಾವೇರಿ: ಜಿಲ್ಲೆಯ ಜನಪದ ವಿಶ್ವವಿದ್ಯಾಲಯದಲ್ಲಿ  ಸರ್ಕಾರ ಮತ್ತು ರಾಜ್ಯಪಾಲರ ಅನುಮತಿ ಪಡೆಯದೆ ಪ್ರಾರಂಭಿಸಿದ್ದ 8 ಕೋರ್ಸ್‌ಗಳನ್ನು ಉನ್ನತ ಶಿಕ್ಷಣ ಇಲಾಖೆ ರದ್ದು ಮಾಡುವಂತೆ ಆದೇಶಿಸಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಗೊಟಗೋಡಿ ಬಳಿ ಇರುವ ಜನಪದ ವಿಶ್ವವಿದ್ಯಾಲಯದಲ್ಲಿ ಒಂದಿಲ್ಲಾ ಒಂದು ಯಡವಟ್ಟು ನಡೆಯುತ್ತಾ ಬಂದಿವೆ. ಸರ್ಕಾರ ಮತ್ತು ರಾಜ್ಯಪಾಲರ ಅನುಮೋದನೆ ಪಡೆಯದೆ, ನಿಯಮಾವಳಿ ರಚಿಸಿದೆ, 2018-19 ರಲ್ಲಿ ಸ್ನಾತಕೋತ್ತರ 8 ಕೊರ್ಸ್‌ಗಳನ್ನ ಪ್ರಾರಂಭ ಮಾಡಿತ್ತು. ಈಗ ವಿಶ್ವವಿದ್ಯಾಲಯ 2018-19ರಿಂದ ಎಂ.ಎ ಅರ್ಥಶಾಸ್ತ್ರ, ಎಂ.ಎ ಕನ್ನಡ ಮತ್ತು ಜನಪದ, ಎಂಎ ಇಂಗ್ಲಿಷ್, ಎಂ.ಎ ಸಮಾಜಶಾಸ್ತ್ರ ಎಂ.ಎಸ್.ಡಬ್ಲ್ಯೂ, ಪ್ರದರ್ಶನಕಲೆ, ದೃಶ್ಯ ಕಲೆ ಮತ್ತು ಎಂ.ಎಂ ಮಹಿಳಾ ಅಧ್ಯಯನ ವಿಷಯಗಳನ್ನ ರದ್ದುಗೊಳಿಸುವಂತೆ ಸೂಚನೆ ನೀಡಿದೆ.‌

ಶಿಕ್ಷಣ ಇಲಾಖೆಯ ನಿರ್ಧಾರದಿಂದ ಈ ವಿಭಾಗದಲ್ಲಿ ಕೆಲಸ ಮಾಡುವ 20ಕ್ಕೂ ಅಧಿಕ ಬೋಧಕ ಮತ್ತು ಬೊಧಕೇತರ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ‌.

ಜನಪದ ವಿಶ್ವವಿದ್ಯಾಲಯ ಪ್ರಾರಂಭದಲ್ಲಿ ಅನುಮೋದನೆ ಸಿಕ್ಕ ಕೋರ್ಸ್‌ಗಳಾದ ಜನಪದ ಕಲೆ, ಜನಪದ ವಿಜ್ಞಾನ, ಜನಪದ ಪ್ರವಾಸೋದ್ಯಮ, ಜನಪದ ಪತ್ರಿಕೋದ್ಯಮ, ಬುಡಕಟ್ಟು ಮತ್ತು ಮಹಿಳಾ ಅಧ್ಯಯನ, ಜನಪದ ಸಾಹಿತ್ಯ ಕೋರ್ಸ್‌ಗಳನ್ನ ನಡೆಸಲು ಅನುಮತಿ ನೀಡಿದೆ.

2018 ಕುಲಪತಿ ಡಿ.ಬಿ.ನಾಯಕ್ ಮತ್ತು ಹಿಂದಿನ ಕುಲಪತಿ ಭಾಸ್ಕರ ಅವರು ಈ ಕೋರ್ಸ್‌ಗಳನ್ನ ಪ್ರಾರಂಭ ಮಾಡಿದ ನಂತರ, 2024 ಮತ್ತು 25ರಲ್ಲಿ ಘಟನೋತ್ತರ ಅನುಮೋದನೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಹೀಗಾಗಿ ನಿಯಮ ಉಲ್ಲಂಘನೆಯಡಿ ಉನ್ನತ ಶಿಕ್ಷಣ ಇಲಾಖೆಯು ಆದೇಶವನ್ನ ಹೊರಡಿಸಿದೆ. ಸರ್ಕಾರವು ಪ್ರೋ. ಬೊರಲಿಂಗಯ್ಯ ನೇತ್ರತ್ವದಲ್ಲಿ ಒಂದು ಸಮಿತಿ ರಚನೆ ಮಾಡಿತ್ತು. ಸಮಿತಿಯು ಪರಿಶೀಲನೆ ನಡೆಸಿ ಜನಪದ ವಿಶ್ವವಿದ್ಯಾಲಯದಲ್ಲಿ ಜನಪದ ಬಗ್ಗೆ ಮಾತ್ರ ಅಧ್ಯಯನ ಮಾಡಬೇಕು. ಇತರೆ ಕಾಲೇಜುಗಳಂತೆ ಇಲ್ಲಿಯೂ ಅದೇ ವಿಷಯಗಳ ಅಧ್ಯಯನ ಮಾಡಿದರೆ ಜನಪದ ವಿಶ್ವವಿದ್ಯಾಲಯಗಳಲ್ಲಿ ಏನೋ ವ್ಯತ್ಯಾಸ ಇರುವುದಿಲ್ಲ ಎಂದು ಸಮಿತಿ ಹೇಳಿದೆ.

ಸರ್ಕಾರವು 8 ಕೋರ್ಸ್ ರದ್ದುಗೊಳಿಸಲು ಆದೇಶಿಸಿದೆ. ಅದನ್ನ ಪಾಲನೆ ಮಾಡಲು ಸೂಚನೆ ನೀಡಿದೆ. ಜನಪದ ವಿಶ್ವವಿದ್ಯಾಲಯದಲ್ಲಿ ಜನಪದ ವಿಷಯ ಮಾತ್ರ ಅದ್ಯಯನ ಮೀಸಲು ಇಡಬೇಕು. ‌ಯಡವಟ್ಟು ಮಾಡಿದ ಮಾಜಿ ಕುಲಪತಿ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜನಪದ ವಿಶ್ವವಿದ್ಯಾಲಯ ಹಳೆಯ ಕುಲಪತಿ ಮಾಡಿದ ಯಡವಟ್ಟಿನಿಂದ ಈಗ 20ಕ್ಕೂ ಅಧಿಕ ಬೋಧಕ ಮತ್ತು ಭೋಧಕೆತರ ಸಿಬ್ಬಂದಿ ಹಾಗೂ 100 ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶುಕ್ರವಾರ ದೇಶಾದ್ಯಂತ ಮುಷ್ಕರ; ಸತತ ನಾಲ್ಕು ದಿನ ಬ್ಯಾಂಕ್‌ ಸೇವೆ ಬಂದ್‌ಕರ್ನಾಟಕದಲ್ಲಿ ಉರ್ದು ಮಾಧ್ಯಮ ಶಿಕ್ಷಣದ ಸ್ಥಿತಿಗತಿ ಅಧ್ಯಯನ ವರದಿ-2025 ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪಶಾಸ್ತ್ರದ ಮಾತು ನಂಬಿ ಊರನ್ನೇ ತೊರೆದ ಗೌಳಿ ಕುಟುಂಬಗಳು – ಸಾವಿನ ಭಯಕ್ಕೆ ಗ್ರಾಮವೇ ಖಾಲಿಆಂಧ್ರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣುಆಂಧ್ರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣುಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಅಂತ್ಯ – ಪುತ್ರಿ, ಗೋಕಾಕ್ ಮನೆಯಲ್ಲಿ 3 ಕೋಟಿ ರೂ. ಸೀಜ್ನಾವೆಲ್ಲ ಒಟ್ಟಾಗಿ ರಾಜ್ಯದಲ್ಲಿ ರೈತರು, ದಲಿತರು, ಹಿಂದೂಗಳ ಪರ ಸರ್ಕಾರ ತರಬೇಕು: ವಿಜಯೇಂದ್ರ ಕರೆಜಾನಪದ ವಿಶ್ವವಿದ್ಯಾಲಯದಲ್ಲಿ ಅನುಮತಿ ಇಲ್ಲದೆ ಹೊಸ ಪಠ್ಯಕ್ರಮ; 8 ಕೋರ್ಸ್‌ಗಳು ರದ್ದುನದಿ ನೀರನ್ನ ಕಲುಷಿತಗೊಳಿಸಿದ್ರೆ ಕಾರ್ಖಾನೆ ಮುಚ್ಚಿಸುತ್ತೇವೆ: ರಾಮಲಿಂಗಾರೆಡ್ಡಿ ಎಚ್ಚರಿಕೆತಂತ್ರಜ್ಞಾನ ಬಳಸಿ, ಖುದ್ದು ಹಾಜರಾತಿ ಸಮಸ್ಯೆಯಾಗುತ್ತೆ – ಸೆ.16ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್