LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೆಡಿಕಲ್ ಶಾಪ್ ಮಾಲೀಕನ ಬರ್ಬರ ಹತ್ಯೆ ಕೇಸ್‌ – 6 ಮಂದಿ ಅರೆಸ್ಟ್‌

Advertisement
Advertisement
Advertisement

ಬೆಂಗಳೂರು: ಮೆಡಿಕಲ್ ಶಾಪ್ ಮಾಲೀಕ ಸುಹೇಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಡೆಪಾಳ್ಯ ರೌಡಿಶೀಟರ್ ಆದಿಲ್ ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಆದಿಲ್‌ ಸ್ನೇಹಿತ ಶಬ್ಬೀರ್ ಕೊಲೆಗೆ ಪ್ರತೀಕಾರವಾಗಿ ಸುಹೇಲ್ ಹತ್ಯೆ ನಡೆದಿದೆ ಎನ್ನಲಾಗಿದೆ. ಸುಹೇಲ್‌ ಹತ್ಯೆ ಬಳಿಕ ಆರೋಪಿಗಳು ಮುಂಬೈಗೆ ಪರಾರಿಯಾಗಲು ಸ್ಕೆಚ್‌ ಹಾಕಿದ್ದರು. ಅಷ್ಟರಲ್ಲೇ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಕಳೆದ ಜನವರಿಯಲ್ಲಿ ಬಂಡೆಪಾಳ್ಯ ವ್ಯಾಪ್ತಿಯಲ್ಲಿ ಶಬ್ಬೀರ್ ಕೊಲೆಯಾಗಿತ್ತು. ಈ ಕೊಲೆಗೆ ಮೆಡಿಕಲ್‌ ಶಾಪ್‌ ಮಾಲೀಕ ಸುಹೇಲ್‌ ಹಣ ನೀಡಿದ್ದ. ಅಲ್ಲದೇ ಶಬ್ಬೀರ್ ಹತ್ಯೆಯಲ್ಲಿ ಸುಹೇಲ್ ಸಹೋದರರು ಭಾಗಿಯಾಗಿದ್ದರು. ಇದರಿಂದ ಕೋಪಗೊಂಡಿದ್ದ ಶಬ್ಬೀರ್‌ನ ಸ್ನೇಹಿತ ಆದಿಲ್, ಪ್ರತಿಕಾರವಾಗಿ ಸುಹೇಲ್ ಹತ್ಯೆ ಮಾಡಿಸಿದ್ದಾನೆ.

ಈ ಮಧ್ಯೆ ಕೊಲೆಯಾದ ಸುಹೇಲ್ ಗೆಳೆಯರ ಬಳಿ ಆದಿಲ್‌ನನ್ನ ಹೊಡೆಸುವುದಾಗಿ ಎಚ್ಚರಿಕೆ ನೀಡಿದ್ದನಂತೆ. ಆದಿಲ್ ಹೊಡೆಸುವುದಕ್ಕೂ ಮುಂಚೆ ನಾನೇ ಹೊಡೆಯುವುದಾಗಿ ಸುಹೇಲ್ ಹೇಳಿದ್ದನಂತೆ. ಹಾಗೆ ಹೇಳಿದ್ದ ಸುಹೇಲ್‌ ಬರ್ಬರವಾಗಿ ಕೊಲೆಯಾಗಿದ್ದು, ಕೊಲೆಗೈದ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.

ಏನಿದು ಘಟನೆ?
ಮಂಗಮ್ಮನಪಾಳ್ಯದ ಸುಹೇಲ್ ಶನಿವಾರ (ಆ.22) ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಮಡಿವಾಳದಿಂದ ಕೊರಮಂಗಲ ಕಡೆಗೆ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದರು.

ಟ್ರಾಫಿಕ್ ಜಾಮ್‌ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ತಲ್ವಾರ್‌ಗಳಿಂದ ಕೊಚ್ಚಿ ಕೊಲೆ ಮಾಡಿದ ಹಂತಕರು ಸ್ಥಳದಿಂದ ಪರಾರಿಯಾಗಿದ್ದರು. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೆಡಿಕಲ್ ಶಾಪ್ ಮಾಲೀಕನ ಬರ್ಬರ ಹತ್ಯೆ ಕೇಸ್‌ – 6 ಮಂದಿ ಅರೆಸ್ಟ್‌ಈದ್ ಮಿಲಾದ್‌ಗೆ 40 ಅಡಿ‌ ಎತ್ತರದ ಟಿಪ್ಪು ಕಟೌಟ್, ಪಾಕ್ ಸೇನೆ ಹಾಡು ಬಳಸಿ ರೀಲ್ಸ್‌ – ಎಫ್‌ಐಆರ್‌ ದಾಖಲುತಮಿಳುನಾಡಿಗೆ ಕಾವೇರಿ ನೀರು: ಸೋಮವಾರಕ್ಕೆ ಸುಪ್ರೀಂ ವಿಚಾರಣೆ ಮುಂದೂಡಿಕೆ“ದಲಿತರ 187 ಕೋಟಿ ಹಣವನ್ನು ನುಂಗಿದ ನಾಗೇಂದ್ರ ರಾಜೀನಾಮೆ ನೀಡಲೇಬೇಕು” – ವಿಧಾನಸೌಧ ಮುತ್ತಿಗೆ, ಬಿಜೆಪಿ ನಾಯಕರು ವಶH1N1 ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಆರೋಗ್ಯ ಇಲಾಖೆ ಹೈ ಅಲರ್ಟ್, ಆಸ್ಪತ್ರೆಗಳು ಸಂಪೂರ್ಣ ಸನ್ನದ್ಧSIR ಮೊದಲ ಮತದಾರರ ಕರಡು ಪಟ್ಟಿ ರಿಲೀಸ್‌; 1,07,96,339 ಮತದಾರರ ಹೆಸರು ಡಿಲೀಟ್‌ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್‌ – ತಮಿಳುನಾಡಿಗೆ 9 ಸಾವಿರ ಕ್ಯೂಸೆಕ್‌ ನೀರು ಹರಿಸಲು ಸೂಚನೆಸಮುದ್ರಕ್ಕೆ ಉರುಳಿದ ಕಾರು – ಅಮೆರಿಕದಲ್ಲಿ ಭಾರತೀಯ ಮೂಲದ ಯುವತಿ ಸಾವುಮಂತ್ರಾಲಯದಲ್ಲಿ ಆ.27ರಿಂದ ರಾಯರ 355ನೇ ಆರಾಧನಾ ಮಹೋತ್ಸವಆತಂಕರಿ ಗಿಡ ಮರಗಳು ಹಾಗೂ ರಂಬೆ ಕಾಂಬೆ ಕತ್ತರಿಸಲು ಯಂತ್ರ ಖರೀದಿ ಮಾಡಿದ ಬೆಳಗಾವಿ ಮಹಾನಗರ ಪಾಲಿಕೆ