ಬೆಳಗಾವಿ: ದಿನದಿಂದ ದಿನಕ್ಕೆ ಸಂಚಾರ ಹೆಚ್ಚುತ್ತಿರುವುದರಿಂದ ಜನಸಾಮಾನ್ಯರಿಗೆ ಅನೇಕ ಬಾರಿ ಕಿರಿ ಕಿರಿ ಉಂಟಾಗುತ್ತಿದೆ. ಅದರಲ್ಲೂ ಬೆಳಗಾವಿ ಮುಖ್ಯ ಸಂಚಾರ ವ್ಯವಸ್ಥೆ ಕೇಂದ್ರ ಬಸ್ ನಿಲ್ದಾಣ ಸಂಚಾರ ವ್ಯವಸ್ಥೆಯಲ್ಲಿ ಒಂದಲ್ಲ ಒಂದು ಅವಘಡ ನಡೆಯುತ್ತಲೇ ಇರುತ್ತವೆ. ದಿನನಿತ್ಯದ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ದ್ವಿಚಕ್ರ , ತ್ರಿಚಕ್ರ ವಾಹನಗಳು ಸಂಚಾರ ನಿಯಮ ಅನ್ವಯ ಎಷ್ಟೇ ಕಡಿವಾಣ ಹಾಕಿದರೂ ಪರಿಹಾರ ಮಾತ್ರ ಅಷ್ಟೇ ! ಇದು ಜನಸಾಮಾನ್ಯರ ಸಮಸ್ಯೆ ಆದರೆ ಸರ್ಕಾರಿ ಅಂಗ ಸಂಸ್ಥೆಯಾದ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಕೂಡ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದು ಅದನ್ನು ಗಮನಿಸಿದ ಎ ಎಸ್ ಐ ಎಸ್ ಆರ್ ಮೈತ್ರಿ ಬಸ್ ಚಾಲಕನಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ದಂಡ ವಿಧಿಸಿದ್ದಾರೆ.
ಎ ಎಸ್ ಐ ಎಸ್ ಆರ್ ಮೈತ್ರಿ ಅವರು ತಮ್ಮ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದವರಿಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಇವರ ಕಾರ್ಯಕ್ಕೆ ಜನ ಮೆಚ್ಚಿಗೂ ಕೂಡ ವ್ಯಕ್ತವಾಗುತ್ತಿದೆ ಇಂಥ ಪ್ರಾಮಾಣಿಕ ಅಧಿಕಾರಿಗಳಿಂದ ಬೆಳಗಾವಿ ಸಂಚಾರ ವ್ಯವಸ್ಥೆ ಸುಗಮಗೊಳ್ಳುವುದರಲ್ಲಿ ಸಹಕಾರವಾಗಲಿದೆ ಎಂದು ಜನಸಾಮಾನ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



