IPL NEWS: ಲಕ್ನೋಗೆ ಮೊದಲ ಜಯ ಕೈಚೆಲ್ಲಿದ ಪಂಜಾಬ್

Mar 31, 2024 - 00:15
 49
Google  News Join WhatsApp Join Telegram Live

IPL NEWS: ಲಕ್ನೋಗೆ ಮೊದಲ ಜಯ ಕೈಚೆಲ್ಲಿದ ಪಂಜಾಬ್

Panchayat Swaraj Samachar News Desk.

ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೂಡ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಲಕ್ನೋ ತನ್ನ ತವರು ಮೈದಾನ ಎಕಾನಾ ಸ್ಟೇಡಿಯಂನಲ್ಲಿ ಆಡಿದ ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 21 ರನ್ಗಳಿಂದ ಮಣಿಸಿತು.

ಈ ಪಂದ್ಯದಲ್ಲಿ ಲಕ್ನೋ ಮೊದಲು ಬ್ಯಾಟ್ ಮಾಡಿ 199 ರನ್ ಗಳಿಸಿತ್ತು. ತಂಡದ ಪರ ಕ್ವಿಂಟನ್ ಡಿ ಕಾಕ್ ಅತ್ಯಧಿಕ 50 ರನ್ ಬಾರಿಸಿದರೆ ನಿಕೋಲಸ್ ಪೂರನ್ ಮತ್ತು ಕೃನಾಲ್ ಪಾಂಡ್ಯ ಅದ್ಭುತ ಬ್ಯಾಟಿಂಗ್ ಮಾಡಿದರು. ಇದಕ್ಕೆ ಪ್ರತಿಯಾಗಿ ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋವ್ ಶತಕದ ಜೊತೆಯಾಟ ನೀಡುವ ಮೂಲಕ ಪಂಜಾಬ್‌ಗೆ ಅದ್ಭುತ ಆರಂಭ ನೀಡಿದರು. ಆದರೆ ಚೊಚ್ಚಲ ಪಂದ್ಯವನ್ನಾಡಿದ ಯುವ ವೇಗದ ಬೌಲರ್ ಮಯಾಂಕ್ ಯಾದವ್ ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂಜಾಬ್ಗೆ ಆಘಾತ ನೀಡಿದರು. ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ ಅಂತಿಮವಾಗಿ 178 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

Google News Join Facebook Live 24/7 Help Desk

Tags: