Crime: ಕೂಲಿ ಕೆಲಸಕ್ಕೆಂದು ಹೋಗಿದ್ದ ಇಬ್ಬರು ಮಹಿಳೆಯರ ಬರ್ಬರ ಹತ್ಯೆ!

Apr 7, 2024 - 16:24
 131
Google  News Join WhatsApp Join Telegram View ePaper

Crime: ಕೂಲಿ ಕೆಲಸಕ್ಕೆಂದು ಹೋಗಿದ್ದ ಇಬ್ಬರು ಮಹಿಳೆಯರ ಬರ್ಬರ ಹತ್ಯೆ!

Panchayat Swaraj Samachar News Desk.

ಕಲಬುರಗಿ: ಕೂಲಿ ಕೆಲಸಕ್ಕೆ ಹೋಗಿದ್ದ ಇಬ್ಬರು ಮಹಿಳೆಯರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ತಾವರಗೇರಾ ಕ್ರಾಸ್ ಬಳಿ ನಡೆದಿದೆ. ಶರಣಮ್ಮ(51), ಚಂದಮ್ಮ(53) ಕೊಲೆಯಾದ ಮಹಿಳೆಯರು. ಶರಣಮ್ಮ ಮತ್ತು ಚಂದಮ್ಮ ಇಂದು ಕೂಲಿ ಕೆಲಸಕ್ಕೆಂದು ಹೋಗಿದ್ದ ವೇಳೆ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಲಬುರಗಿ ಗ್ರಾಮಾಂತರ ಠಾಣೆ ಪೊಲೀಸರು ದೌಡಾಯಿಸಿ ತನಿಖೆ ಕೈಗೊಂಡಿದ್ದಾರೆ.

ಕೆ,ಕೆ ನಗರ ನಿವಾಸಿ ಶರಣಮ್ಮ ಮತ್ತು ತಾಜ್ ಸುಲ್ತಾನ್ ಪುರ ನಿವಾಸಿ ಚಂದಮ್ಮ ನಗರದ ಗಂಜ್ ಪ್ರದೇಶ ದಿಂದ ಬಸ್ ನಲ್ಲಿ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ಆದ್ರೆ, ಈ ಇಬ್ಬರು ಮಹಿಳೆಯರ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇನ್ನು ಈ ಕೊಲೆಗಳನ್ನು ಮಾಡಿದ್ಯಾರು? ಯಾಕೆ ಮಾಡಿದ್ರು? ಎನ್ನುವ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಬೆಂಗಳೂರು: ಸೀರೆಯಿಂದ ಕತ್ತು ಬಿಗಿದು ಪತಿ ಯಿಂದಲೇ ಪತ್ನಿಯನ್ನು ಹತ್ಯೆಗೈದಿರುವಂತಹ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೇತ್ರಾವತಿ ಮೃತ ಪತ್ನಿ. ನೇತ್ರಾವತಿಯನ್ನು ನಿನ್ನೆ ರಾತ್ರಿ ಹತ್ಯೆ ಮಾಡಿ ವೆಂಕಟೇಶ್ ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೆಂಕಟೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Google News Join Facebook Live 24/7 Help Desk

Tags: