ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ ಇದೆ

Apr 7, 2024 - 14:18
 118
Google  News Join WhatsApp Join Telegram View ePaper

ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ ಇದೆ

Panchayat Swaraj Samachar News Desk.

ಶಿವಮೊಗ್ಗ: ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ ಇದೆ. ಸಾಯುವವರೆಗೂ ನಾನು ಮೋದಿ ಜೊತೆ ಇರುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನುಡಿದಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರಿಂದು ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಿದ್ದಾರೆ. ಸಭೆಯಲ್ಲಿ ಮತ್ತೆ ಬಿಎಸ್‌ವೈ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಈ ಬಾರಿ ಚುನಾವಣೆಯಲ್ಲಿ ಧರ್ಮದ ಪರವಾಗಿರುವ ಈಶ್ವರಪ್ಪ ಗೆದ್ದೆ ಗೆಲ್ತಾರೆ, ನಾನು ಯಾರಿಗಾದರೂ ಅನ್ಯಾಯ ಮಾಡಿದ್ದರೆ, ಭಗವಂತ ನನ್ನ ಮಕ್ಕಳನ್ನು ಹಾಳು ಮಾಡಲಿ. ನರೇಂದ್ರ ಮೋದಿ ಕೇಂದ್ರದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತಾರೆ. ಆದರೆ ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ? ನನ್ನ ರಕ್ತದ ಕಣ-ಕಣದಲ್ಲೂ ಬಿಜೆಪಿ ಇದೆ. ಸಾಯುವವರೆಗೂ ನಾನು ಮೋದಿ ಜೊತೆ ಇರುತ್ತೇನೆ. ಯಡಿಯೂರಪ್ಪ ಅವರು ಕೆಜೆಪಿಗೆ ಹೋಗಿ ಬಂದ್ರು, ನನ್ನನ್ನು ಕಡಿದರೂ ನಾನು ಬೇರೆ ಪಕ್ಷಕ್ಕೆ ಹೋಗಲಿಲ್ಲ ಎಂದು ನುಡಿದಿದ್ದಾರೆ.

ಹಿಂದುತ್ವದ ಪರವಾಗಿ ಇದ್ದವರನ್ನು ಮೂಲೆಗುಂಪು ಮಾಡಿದ್ದಾರೆ. ಸಿ.ಟಿ.ರವಿ ಏನು ತಪ್ಪು ಮಾಡಿದ್ದರು? ಮಂತ್ರಿಸ್ಥಾನ ಬಿಟ್ಟು ಪಕ್ಷ ಸಂಘಟನೆಗೆ ಹೋದರು ಅವರಿಗೆ ಯಾಕೆ ಅಧ್ಯಕ್ಷ ಸ್ಥಾನ ಕೊಡಲಿಲ್ಲ? ಕಾಂಗ್ರೆಸ್ ಹಿಂದುಗಳನ್ನ ತುಳಿದು ಮುಸ್ಲಿಮಗೆ ಹೆಚ್ಚಿನ ಆದ್ಯತೆ ಕೊಟ್ಟಿದೆ. ಹಿಂದುತ್ವ ಉಳಿಸಬೇಕು ಅದಕ್ಕಾಗಿ ನಾನು ಸ್ಪರ್ಧೆ ಮಾಡ್ತಿದ್ದೀನಿ ಎಂದಿದ್ದಾರೆ.

Google News Join Facebook Live 24/7 Help Desk

Tags: