ಏನಾಯಿತು ಬೆಂಗಳೂರಿಗೆ? ಸಾಲು ಸಾಲು ಹತ್ಯೆಗಳ ತಾಣವಾಯಿತೆ ರಾಜಧಾನಿ...

Apr 19, 2024 - 13:41
 142
Google  News Join WhatsApp Join Telegram View ePaper

ಏನಾಯಿತು ಬೆಂಗಳೂರಿಗೆ? ಸಾಲು ಸಾಲು ಹತ್ಯೆಗಳ ತಾಣವಾಯಿತೆ ರಾಜಧಾನಿ...

Panchayat Swaraj Samachar News Desk.

ಬೆಂಗಳೂರಿನ ಹೊರಮಾವಿನಲ್ಲಿ ಮಾರಕಾಸ್ತ್ರಗಳಿಂದ 28 ವರ್ಷದ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ಯುವಕನನ್ನು ಕೀರ್ತಿ ಎಂದು ಗುರುತಿಸಲಾಗಿದೆ. ಕೌಟುಂಬಿಕ‌ ಕಲಹದಿಂದ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ. ಹೆಣ್ಣೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಮತ್ತೊಂದೆಡೆ ನಿನ್ನೆ ರಾತ್ರಿ ದೊಮ್ಮಲೂರು ಬಿಡಿಎ ಪಾರ್ಕ್ ಬಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ ಮಾಡಲಾಗಿದೆ. ಶಿವಾಜಿನಗರ ನಿವಾಸಿ ಸತೀಶ್ (32), ಕೊಲೆಯಾದ ವ್ಯಕ್ತಿ.

ಬೆಂಗಳೂರಲ್ಲಿ ಕೊರಿಯರ್ ಕೆಲಸ ಮಾಡ್ತಿದ್ದ ಸತೀಶ್, ಶಿವಾಜಿನಗರದಲ್ಲಿ ಕುಟುಂಬ ಸಮೇತ ವಾಸವಿದ್ದ. ರಾತ್ರಿ ಪಲ್ಲಕ್ಕಿ ಉತ್ಸವ ನೋಡಲು ದೊಮ್ಮಲೂರಿಗೆ ಬಂದಿದ್ದ. ಪಲ್ಲಕ್ಕಿ ಉತ್ಸವ ಮುಗಿಸಿ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದ. ಪಾರ್ಟಿಯಲ್ಲಿ ಗಲಾಟೆಯಾಗಿ ಸ್ನೇಹಿತರಿಂದ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ.

ನಿನ್ನೆಯಷ್ಟೇ ಸಾರಕ್ಕಿಯ ಮಾರ್ಕೆಟ್ ಬಳಿಯ ಡಬಲ್ ಮರ್ಡರ್ ನಡೆದಿತ್ತು. ಅನುಷಾ ಮತ್ತು ಸುರೇಶ್ ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಡಬಲ್ ಮರ್ಡರ್ ಪ್ರಕರಣ ಮಾಸುವ ಮುನ್ನವೇ ಮತ್ತೆ ಇಬ್ಬರು ಯುವಕರನ್ನು ಕೊಚ್ಚಿ ಕೊಲೆ ಮಾಡಲಾಗಿದೆ.

Google News Join Facebook Live 24/7 Help Desk

Tags: