ಇಂದು ಆರ್.ಸಿಬಿ ಮತ್ತು ಕೆಕೆಆರ್ ಮ್ಯಾಚ್, ಇದು ಆರ್.ಸಿಬಿ ಅಳಿವು ಉಳಿವಿನ ಪ್ರಶ್ನೆ

Apr 21, 2024 - 10:09
 85
Google  News Join WhatsApp Join Telegram View ePaper

ಇಂದು ಆರ್.ಸಿಬಿ ಮತ್ತು ಕೆಕೆಆರ್ ಮ್ಯಾಚ್, ಇದು ಆರ್.ಸಿಬಿ ಅಳಿವು ಉಳಿವಿನ ಪ್ರಶ್ನೆ

Panchayat Swaraj Samachar News Desk.

ಸತತ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವಿಗಾಗಿ ಹೋರಾಟ ನಡೆಸಲಿದೆ. ತವರಿನಲ್ಲೇ ಪಂದ್ಯ ನಡೆಯುತ್ತಿದ್ದರಿಂದ ಕೆಕೆಆರ್ ತಂಡವನ್ನು ಮಣಿಸುವುದು ಆರ್ಸಿಬಿಗೆ ಅಷ್ಟು ಸುಲಭವಲ್ಲ. ಹೀಗಾಗಿ ನಿರ್ಣಾಯಕ ಪಂದ್ಯ ಗೆಲ್ಲಲು ಕ್ಯಾಪ್ಟನ್ ಫಾಫ್ ಭಾರೀ ರಣತಂತ್ರವನ್ನೇ ಹೆಣೆಯಬೇಕಿದೆ. ಪ್ಲೇ ಆಫ್‌ ಭರವಸೆ ಜೀವಂತವಾಗಿರಬೇಕು ಎಂದರೆ ಈ ಪಂದ್ಯ ಆರ್ಸಿಬಿ ಗೆಲ್ಲಲೇಬೇಕು.

ಹೈದರಾಬಾದ್ ವಿರುದ್ಧದ ಕಳೆದ ಮ್ಯಾಚ್ನಲ್ಲಿ ತೀವ್ರ ಪೈಪೋಟಿ ಕೊಟ್ಟು ಸೋಲು ಕಂಡಿತ್ತು. ಆದರೆ ಇಂದು ನಡೆಯುವ ಪಂದ್ಯದಲ್ಲಿ ಆರ್ಸಿಬಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಇದರಿಂದ ವಿರಾಟ್ ಕೊಹ್ಲಿ, ಫಾಫ್ ಬ್ಯಾಟಿಂಗ್ನಲ್ಲಿ ಆರ್ಭಟಿಸಬೇಕಿದೆ. ಇದು ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಬರುವ ರಜತ್ ಪಾಟಿದಾರ್, ಲೋಮ್ರಾರ್ ಸೇರಿದಂತೆ ಉಳಿದ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಬೇಕಿದೆ. ಇನ್ನು ಆರ್ಸಿಬಿ ಬೌಲಿಂಗ್ ಕೂಡ ಕಳಪೆಮಟ್ಟ ತಲುಪಿದ್ದು ಈ ಪಂದ್ಯದಲ್ಲಾದರೂ ಯಶಸ್ವಿ ಪ್ರದರ್ಶನ ನೀಡಬೇಕು ಎನ್ನುವುದು ಫ್ಯಾನ್ಸ್ ಅಭಿಪ್ರಾಯವಾಗಿದೆ.

ಈಗಾಗಲೇ ಟೂರ್ನಿಯಲ್ಲಿ ಸೂಪರ್ ಆಗಿ ಆಡಿರುವ ಶ್ರೇಯಸ್ ಅಯ್ಯರ್ ಟೀಮ್ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಆರ್ಸಿಬಿ 7 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು ಉಳಿದ 6 ಪಂದ್ಯಗಳನ್ನು ಸೋತಿದೆ. ಹೀಗಾಗಿ ಮುಂಬರುವ ಎಲ್ಲ ಪಂದ್ಯಗಳನ್ನು ಬೆಂಗಳೂರು ಗೆಲ್ಲಲೇಬೇಕಾಗಿದೆ. ಒಟ್ಟಾರೆ ಕೊನೆಯ 8 ಪಂದ್ಯಗಳಲ್ಲಿ ಆರ್‌ಸಿಬಿ ಕನಿಷ್ಠ 7 ಪಂದ್ಯಗಳನ್ನು ಗೆದ್ದರೆ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ. 

Google News Join Facebook Live 24/7 Help Desk

Tags: