LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವವಿಖ್ಯಾತ ಮೈಸೂರು ದಸರಾ ಮೊದಲ ಹಂತದ ಗಜಪಯಣಕ್ಕೆ ಚಾಲನೆ

Advertisement
Advertisement
Advertisement

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ದಸರಾ ಗಜಪಯಣಕ್ಕೆ ಚಾಲನೆ ದೊರೆತಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ  ಅವರು ದಸರಾ ಗಜಪಡೆಗೆ ಚಾಲನೆ ನೀಡಿದ್ದಾರೆ.

ಹುಣಸೂರಿನ ವೀರನಹೊಸಳ್ಳಿಯಲ್ಲಿ ಗಜಪಯಣದ ಕಾರ್ಯಕ್ರಮ ಜರುಗಿದ್ದು, ಬೆಳಗ್ಗೆ 10 ರಿಂದ 10:28ರ ಶುಭ ತುಲಾ ಲಗ್ನದಲ್ಲಿ ಗಜಪಡೆಗೆ ಪೂಜೆ ಸಲ್ಲಿಕೆಯಾಗಿದೆ. ದಸರಾ ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ, ಫಲತಾಂಬೂಲ ನೀಡುವ ಮೂಲಕ ಚಾಲನೆ ನೀಡಲಾಯಿತು. ಆನಂತರ ಗಜಪಡೆ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿವೆ. 

ದಸರಾ ಗಜಪಯಣದ ಮೊದಲ ಹಂತದಲ್ಲಿ ಒಟ್ಟು 9 ಆನೆಗಳಾದ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ ಹಾಗೂ ಅಭಿಮನ್ಯು ಆಗಮಿಸಿವೆ. ಕಾರ್ಯಕ್ರಮದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದರು.

ಕ್ಯಾಪ್ಟನ್ ಅಭಿಮನ್ಯುವಿಗೆ ಬೀಳ್ಕೊಡುಗೆ:
ಸತತ 6 ವರ್ಷಗಳ ಕಾಲ ನಿರ್ವಿಘ್ನವಾಗಿ ಜಂಬೂ ಸವಾರಿ ನೆರವೇರಿಸಿಕೊಟ್ಟಿದ್ದ ಅಭಿಮನ್ಯು ಆನೆಗೆ ಗಜಪಯಣದ ವೇಳೆ ಅರಣ್ಯ ಇಲಾಖೆಯು ವಿಶೇಷ ಬೀಳ್ಕೊಡುಗೆ ಸಲ್ಲಿಸಿದೆ. ಬಣ್ಣ ಬಣ್ಣದ ಚಿತ್ತಾರ ಬಿಡಿಸಿಕೊಂಡು ಸಿಂಗಾರಗೊಂಡ ಅಭಿಮನ್ಯುವನ್ನು ಶಂಖ, ಚಕ್ರ, ಗಂಡಭೇರುಂಡ ಹೂವಿನ ಬಳ್ಳಿ ಬಿಡಿಸಿದ ದಾರಿಯುದ್ದಕ್ಕೂ ಹೂಮಳೆ ಸುರಿಸಿ ಸಿಬ್ಬಂದಿ ಕರೆತಂದಿದ್ದಾರೆ. ಅರಣ್ಯ ಇಲಾಖೆಯ ಅಚ್ಚುಮೆಚ್ಚಿನ ಆನೆಯಾಗಿರುವ ಅಭಿಮನ್ಯುವಿಗೆ ಬೀಳ್ಕೊಡುಗೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರು. ಈ ಹಿನ್ನೆಲೆ ಗಜಪಯಣ ವೇಳೆ ಅಭಿಮನ್ಯುವಿಗೆ ಬೀಳ್ಕೊಡುಗೆಯನ್ನು ಹಮ್ಮಿಕೊಳ್ಳಲಾಗಿತ್ತು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್ ಮದ ಇಳಿಸುವ ಶಕ್ತಿ ಬಿಜೆಪಿಗಿದೆ – ಗುಡುಗಿದ ವಿಜಯೇಂದ್ರಆನ್‌ಲೈನ್‌ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್‌ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ: ಖಾದರ್‌ ಸ್ಫೋಟಕ ಹೇಳಿಕೆವಿಶ್ವವಿಖ್ಯಾತ ಮೈಸೂರು ದಸರಾ ಮೊದಲ ಹಂತದ ಗಜಪಯಣಕ್ಕೆ ಚಾಲನೆವಿಜಯಪುರ | ಭೂತನಾಳ ಕೆರೆಯಲ್ಲಿ 6 ಶವ ಪತ್ತೆ – ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಶಂಕೆಸಾಮಾಜಿಕ ಜಾಲತಾಣಗಳ ಮೇಲೆ ಖಾಕಿ ಕಣ್ಣು, ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣ ಕ್ರಮ: ಚಾ.ನಗರ ಎಸ್‌ಪಿ ಎಚ್ಚರಿಕೆಪತ್ನಿ ಫೋಟೋ ಸ್ಟೇಟಸ್‌ಗೆ, ಅನೈತಿಕ ಸಂಬಂಧ ಶಂಕೆ – ಕುಡುಗೋಲಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆಗೈದ ದಂಪತಿಕರ್ನಾಟಕ ಸಹಕಾರ ಮಹಾ ಮಂಡಲದ ಅಧ್ಯಕ್ಷರಾಗಿ ಜಿ.ಟಿ.ದೇವೇಗೌಡ ಆಯ್ಕೆSIR ಆಕ್ಷೇಪಣೆ ಅವಧಿ ವಿಸ್ತರಣೆಗೆ ಡಿಕೆ ಮನವಿ – ಕೇಂದ್ರ ಚುನಾವಣಾ ಆಯೋಗಕ್ಕೆ 2 ಪುಟಗಳ ಪತ್ರರೇಷ್ಮೆ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನಕ್ಕೇರಲಿ: ಗೋವಿಂದ ಕಾರಜೋಳರೇಷ್ಮೆ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನಕ್ಕೇರಲಿ: ಗೋವಿಂದ ಕಾರಜೋಳ