LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗಾವಿಯಲ್ಲಿ SIR ಕೆಲಸದ ಒತ್ತಡಕ್ಕೆ ಶಿಕ್ಷಕ ಸಾವು

Advertisement
Advertisement

ಬೆಳಗಾವಿ: SIR  ಕಾರ್ಯದ ಒತ್ತಡದ ನಡುವೆ ಬೆಳಗಾವಿ  ಜಿಲ್ಲೆಯ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಅಥಣಿ ಪಟ್ಟಣದ ನಿವಾಸಿ ಹಾಗೂ ರಾಯಬಾಗ ತಾಲೂಕಿನ ನಿಲಜಿ ಗ್ರಾಮದ ಪಡದಾಳೆ ತೋಟದ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಪ್ರಕಾಶ್ ಕಾಂಬಳೆ ಮೃತಪಟ್ಟ ದುರ್ದೈವಿ.

ಪ್ರತಿದಿನ ಮನೆಗೆ ಬಂದ ಬಳಿಕವೂ ಕೆಲಸ ಬಹಳ ಇದೆ, ಬೇಗ ಮುಗಿಸಬೇಕು ಎಂದು ಪ್ರಕಾಶ್ ಹೇಳಿಕೊಳ್ಳುತ್ತಿದ್ದರು. ಕಳೆದ ಕೆಲವು ದಿನಗಳಿಂದ SIR ಕೆಲಸದ ಒತ್ತಡ ಹೆಚ್ಚಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ. 

ಪ್ರಕಾಶ್ ಅವರ ಪತ್ನಿ ಮಾಲಾ, ಕೆಲಸದ ಒತ್ತಡವೇ ನನ್ನ ಗಂಡನ ಸಾವಿಗೆ ಕಾರಣ. ಪ್ರತಿದಿನ ಕೆಲಸದ ಒತ್ತಡದ ಬಗ್ಗೆ ಅವರು ತುಂಬಾ ಆತಂಕದಲ್ಲಿದ್ದರು ಎಂದು ಆರೋಪಿಸಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ, ಬಿಪಿ ಲೋ  ಆಗಿದ್ದ ಹಿನ್ನೆಲೆ ಪ್ರಕಾಶ್ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಸಾವಿಗೆ ಕೆಲಸದ ಒತ್ತಡವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಪ್ರಕಾಶ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಥಣಿ ಪಟ್ಟಣದ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆ.1 ರಿಂದ ವಾಹನಗಳ ಬೆಲೆ ದುಬಾರಿ – ಬಾಡಿಗೆದಾರರಿಗೂ ತಟ್ಟಲಿದೆ ಬೆಲೆ ಏರಿಕೆ ಬಿಸಿ‌ಫಾರಿನ್‌ ಸೀರೆ, ವಜ್ರಾಭರಣದ ಗಿಫ್ಟ್ ಆಸೆ ಮಹಿಳೆಗೆ 1.75 ಕೋಟಿ ನಾಮಆ.1 ರಂದು ಮೈಸೂರಿಗೆ ಮೋದಿ – 45 ಕೋಟಿ ವೆಚ್ಚದ ವಿವೇಕಾನಂದ ಸ್ಮಾರಕ, ಸಾಂಸ್ಕೃತಿಕ ಯುವಕೇಂದ್ರ ಉದ್ಘಾಟನೆಕೆಪಿಎಸ್‍ಸಿ ಹಗರಣದ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹದಸರಾ ಉದ್ಘಾಟನೆ ರೇಸ್‌ನಲ್ಲಿ ಕ್ರಿಕೆಟ್ ಸಾಧಕರ ಹೆಸರು – ಸಿಎಂ ನಿರ್ಧಾರವೇ ಅಂತಿಮ: ಯತೀಂದ್ರಮೇಕೆದಾಟು ಯೋಜನೆಗೆ ತಮಿಳುನಾಡು ಸಮ್ಮತಿ ಅಗತ್ಯವಿಲ್ಲ: ಕೇಂದ್ರ ಸ್ಪಷ್ಟನೆಖರ್ಗೆ ನಂತರ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರೇ ಆಗಬಹುದು: ಶಿವಲಿಂಗೇಗೌಡ ಭವಿಷ್ಯಹಿಟ್ & ರನ್‌ಗೆ ಬೈಕ್ ಸವಾರ ಸಾವುತಮ್ಮ ಬರ ನೀಗಿಸಿಕೊಳ್ಳಲು ದೆಹಲಿಗೆ ಹೋಗಿದ್ದಾರೆ, ಸರ್ಕಾರಕ್ಕೆ ರೈತರ ಬರ ಆದ್ಯತೆಯಲ್ಲ: ಸಿ.ಟಿ ರವಿಕ್ಯಾಬ್ ಕಾಯುತ್ತಿದ್ದ ಯುವತಿಗೆ ‘ನಿನ್ ರೇಟ್ ಎಷ್ಟು’ ಅಂತ ಕಿರುಕುಳ ನೀಡಿದ ಬೈಕ್ ಸವಾರ