LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

RTO ಅಧಿಕಾರಿಗಳ ವಿಶೇಷ ಕಾರ್ಯಾಚರಣೆ – 390 ಖಾಸಗಿ ಶಾಲಾ ವಾಹನಗಳು ಸೀಜ್

Advertisement
Advertisement

ವಿಜಯನಗರ: ಫಿಟ್ನೆಸ್‌, ಇನ್ಶುರೆನ್ಸ್‌ ಇಲ್ಲದೇ ಓಡಾಟ ನಡೆಸುತ್ತಿದ್ದ ಖಾಸಗಿ ಶಾಲಾ ವಾಹನಗಳ ವಿರುದ್ಧ ವಿಜಯನಗರ ಜಿಲ್ಲೆಯ ಆರ್‌ಟಿಒ ಅಧಿಕಾರಿಗಳ ತಂಡ ಸಮರ ಸಾರಿದೆ. ವಿಶೇಷ ಕಾರ್ಯಾಚರಣೆ ನಡೆಸಿದ್ದು, ನೂರಾರು ವಾಹನಗಳನ್ನ ಜಪ್ತಿ ಮಾಡಿದೆ.

ಹೌದು. ಜಿಲ್ಲೆಯಲ್ಲಿ ಫಿಟ್ನೆಸ್‌, ಇನ್ಶುರೆನ್ಸ್‌ ಇಲ್ಲದೇ ಓಡಾಟ ನಡೆಸುತ್ತಿದ್ದ ಖಾಸಗಿ ಶಾಲೆಗಳ 390 ವಾಹನಗಳನ್ನ ಆರ್‌ಟಿಒ ಅಧಿಕಾರಿಗಳ ತಂಡ ಜಪ್ತಿ ಮಾಡಿದೆ.

ಕಳೆದ ಫೆಬ್ರವರಿಯಿಂದ ಈವರೆಗೆ 103 ಪ್ರಕರಣಗಳು ದಾಖಲಾಗಿದ್ದು, 11 ಲಕ್ಷ ರೂ.ಗಿಂತಲೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ದಂಡ ಪಾವತಿಸಿದ ಬಳಿಕ ವಾಹನಗಳನ್ನ ಬಿಟ್ಟು ಕಳಿಸಲಾಗಿದೆ.

ಅಧಿಕಾರಿಗಳಿಂದ ಎಚ್ಚರಿಕೆ
ಇನ್ನೂ ಜಪ್ತಿ ಮಾಡಿದ ಖಾಸಗಿ ಶಾಲಾ ವಾಹನ ಮಾಲೀಕರಿಂದ ದಂಡ ವಸೂಲಿ ಮಾಡಿರುವ ಅಧಿಕಾರಿಗಳು, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ವಾಹನಗಳ ದಾಖಲಾತಿಗಳನ್ನ ಸರಿಪಡಿಸಿಕೊಂಡು ರಸ್ತೆಗೆ ವಾಹನ ಇಳಿಸಬೇಕು ಅಂತಾ ವಿಜಯನಗರ ಜಿಲ್ಲೆಯ ಆರ್‌ಟಿಒ ಅಧಿಕಾರಿ ಕೆ. ದಾಮೋದರ ಖಾಸಗಿ ಶಾಲಾ ಆಡಳಿತ ಮಂಡಳಿ ಮಾಲೀಕರು ಹಾಗೂ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅರಣ್ಯ ಇಲಾಖೆಯಿಂದ ಶಾಕ್ – ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ರೇಟ್ ಡಬಲ್ರಾಜೀನಾಮೆ ಬಳಿಕ ಸಂಸತ್‌ ಭವನಕ್ಕೆ ಬಂದ ಧರ್ಮೇಂದ್ರ ಪ್ರಧಾನ್‌ಗೆ ಪೇಟ ತೊಡಿಸಿ ಅದ್ಧೂರಿ ಸ್ವಾಗತವಿದ್ಯಾರ್ಥಿಗಳ ಪ್ರತಿಭಟನೆ ವೇಳೆ AK-47 ಹಿಡಿದು ಗುಂಡು ಹಾರಿಸಿದ ಕಾನ್ಸ್‌ಟೇಬಲ್‌ – ವಿಡಿಯೋ ವೈರಲ್‌ ಬೆನ್ನಲ್ಲೇ ಅಮಾನತುಕುಡಿಯುವ ನೀರಿಗಾಗಿ 224 ಕೋಟಿ ಅನುದಾನ ಬಿಡುಗಡೆ – ಈಶ್ವರ್ ಖಂಡ್ರೆಗದ್ದಲ ಕೋಲಾಹಲದ ನಡುವೆ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಮಂಡನೆ5,000 ರೂ. ಲಂಚ ಪಡೆದ ಆರೋಪ – ಹೆಡ್‌ ಕಾನ್ಸ್‌ಟೇಬಲ್‌ ಸಸ್ಪೆಂಡ್‌ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯಪತ್ರಕರ್ತರ ಸೋಗಿನಲ್ಲಿ ಸುಲಿಗೆ ಮಾಡ್ತಿದ್ದ ನಾಲ್ವರು ಯೂಟ್ಯೂಬರ್ಸ್ ಅರೆಸ್ಟ್ಧುಮ್ಮಿಕ್ಕುತ್ತಿರುವ ʻಜೋಗದ ಸಿರಿʼಯನ್ನು ಕಣ್ತುಂಬಿಕೊಂಡ ಸಾವಿರಾರು ಪ್ರವಾಸಿಗರುನಿಪ್ಪಾಣಿಯಲ್ಲಿ ಆಲ್ ಇಂಡಿಯಾ ಪ್ಯಾಂಥರ್ ಸೇನೆಯಿಂದ ಗಮನ ಸೆಳೆಯುವ ಧರಣಿ; NEET ಪ್ರಕರಣದ ವಿವಿಧ ಬೇಡಿಕೆಗಳ ಕುರಿತು ತಹಶೀಲ್ದಾರರಿಗೆ ಮನವಿ