LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗದ್ದಲ ಕೋಲಾಹಲದ ನಡುವೆ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಮಂಡನೆ

Advertisement
Advertisement

ನವದೆಹಲಿ: ವಿಪಕ್ಷಗಳ ಗದ್ದಲ ಕೋಲಾಹಲದ ನಡುವೆಯೇ ಲೋಕಸಭೆಯಲ್ಲಿ  ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಮಂಡನೆಯಾಗಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸೋಮವಾರ (ಇಂದು) ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ-2026 (Public Examinations (Prevention of Unfair Means) Amendment Bill, 2026) ಅನ್ನು ಮಂಡಿಸಿದರು.

ಈ ವೇಳೆ ಪ್ರತಿಪಕ್ಷ ಸಂಸದರು ಘೋಷಣೆ ಕೂಗುತ್ತಾ ಪ್ರತಿಭಟನೆ  ನಡೆಸಲು ಮುಂದಾದರು, ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಚ್‌ಗೆ ಹೊಣೆಗಾರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಸದನದಲ್ಲಿ ಗದ್ದಲ ಉಂಟಾದ ಹಿನ್ನೆಲೆ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

ಮಧ್ಯಾಹ್ನದ ಬಳಿಕ ಈ ಮಸೂದೆ ಕುರಿತು ಚರ್ಚೆ ಆರಂಭವಾಗಲಿದೆ. ಕರ್ನಾಟಕ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಯುವ ಸಂಸದರು ಮಸೂದೆ ಕುರಿತು ತಮ್ಮ ಭಾಷಣ ಮಾಡಲಿದ್ದಾರೆ.

ಮುಂಗಾರು ಅಧಿವೇಶನದ ಮೊದಲ ವಾರವು ಮುಖ್ಯವಾಗಿ ನೀಟ್  ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರತಿಪಕ್ಷದ ಪ್ರತಿಭಟನೆಗಳಿಂದ ಬಹುತೇಕ ವ್ಯರ್ಥವಾದ ಬಳಿಕ, ಮುಂಗಾರು ಅಧಿವೇಶನದ ಕಲಾಪಗಳು ಮತ್ತೆ ಆರಂಭಗೊಂಡಿದ್ದವು. ಇಂದು ಬೆಳಗ್ಗೆ ಆರಂಭದಲ್ಲೇ ಸ್ಪೀಕರ್‌ ಓಂ ಬಿರ್ಲಾ ಅವರ ಮನವಿಹೊರತಾಗಿಯೂ ವಿಪಕ್ಷಗಳು ಗದ್ದಲ ಸೃಸ್ಟಿಸಿದ್ದವು, ಇದರಿಂದ ಮಧ್ಯಾಹ್ನ 12 ಗಂಟೆ ವರೆಗೆ ಚರ್ಚೆ ಮುಂದೂಡಲಾಗಿತ್ತು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅರಣ್ಯ ಇಲಾಖೆಯಿಂದ ಶಾಕ್ – ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ರೇಟ್ ಡಬಲ್ರಾಜೀನಾಮೆ ಬಳಿಕ ಸಂಸತ್‌ ಭವನಕ್ಕೆ ಬಂದ ಧರ್ಮೇಂದ್ರ ಪ್ರಧಾನ್‌ಗೆ ಪೇಟ ತೊಡಿಸಿ ಅದ್ಧೂರಿ ಸ್ವಾಗತವಿದ್ಯಾರ್ಥಿಗಳ ಪ್ರತಿಭಟನೆ ವೇಳೆ AK-47 ಹಿಡಿದು ಗುಂಡು ಹಾರಿಸಿದ ಕಾನ್ಸ್‌ಟೇಬಲ್‌ – ವಿಡಿಯೋ ವೈರಲ್‌ ಬೆನ್ನಲ್ಲೇ ಅಮಾನತುಕುಡಿಯುವ ನೀರಿಗಾಗಿ 224 ಕೋಟಿ ಅನುದಾನ ಬಿಡುಗಡೆ – ಈಶ್ವರ್ ಖಂಡ್ರೆಗದ್ದಲ ಕೋಲಾಹಲದ ನಡುವೆ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಮಂಡನೆ5,000 ರೂ. ಲಂಚ ಪಡೆದ ಆರೋಪ – ಹೆಡ್‌ ಕಾನ್ಸ್‌ಟೇಬಲ್‌ ಸಸ್ಪೆಂಡ್‌ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯಪತ್ರಕರ್ತರ ಸೋಗಿನಲ್ಲಿ ಸುಲಿಗೆ ಮಾಡ್ತಿದ್ದ ನಾಲ್ವರು ಯೂಟ್ಯೂಬರ್ಸ್ ಅರೆಸ್ಟ್ಧುಮ್ಮಿಕ್ಕುತ್ತಿರುವ ʻಜೋಗದ ಸಿರಿʼಯನ್ನು ಕಣ್ತುಂಬಿಕೊಂಡ ಸಾವಿರಾರು ಪ್ರವಾಸಿಗರುನಿಪ್ಪಾಣಿಯಲ್ಲಿ ಆಲ್ ಇಂಡಿಯಾ ಪ್ಯಾಂಥರ್ ಸೇನೆಯಿಂದ ಗಮನ ಸೆಳೆಯುವ ಧರಣಿ; NEET ಪ್ರಕರಣದ ವಿವಿಧ ಬೇಡಿಕೆಗಳ ಕುರಿತು ತಹಶೀಲ್ದಾರರಿಗೆ ಮನವಿ