LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ತೆರಳುವಾಗ ಕಾರು ಅಪಘಾತ – BSNL ನಿವೃತ್ತ ನೌಕರ ದುರ್ಮರಣ

Advertisement
Advertisement

ಶಿವಮೊಗ್ಗ: ತಾಲೂಕಿನ  ಆಯನೂರು–ಸಿರಿಗೆರೆ ರಸ್ತೆಯ ಹೊಸೂರು ದರ್ಗಾ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ  ದಾವಣಗೆರೆ  ಮೂಲದ ಬಿಎಸ್ಎನ್‌ಎಲ್‌ ನಿವೃತ್ತ ನೌಕರರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೃತರನ್ನು ದಾವಣಗೆರೆ ನಿವಾಸಿ ಸುರೇಶ್ (65) ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಅವರು ತಮ್ಮ ಮಗನೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಾರುತಿ ಸ್ವಿಫ್ಟ್ ಕಾರಿನಲ್ಲಿ ದಾವಣಗೆರೆಗೆ ಮರಳುತ್ತಿದ್ದರು. ಕಾರನ್ನು ಅವರ ಪುತ್ರ ಅಮೃತ್‌ (36) ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಆಯನೂರು–ಸಿರಿಗೆರೆ ರಸ್ತೆಯ ಹೊಸೂರು ದರ್ಗಾ ಸಮೀಪ ತಲುಪುತ್ತಿದ್ದಂತೆ, ಏಕಾಏಕಿ ಕಾರಿನ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿಯಲ್ಲಿದ್ದ ಮೋರಿಗೆ ಕಾರು ಅತಿ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನಕ್ಕೂ ಭಾರೀ ಹಾನಿಯಾಗಿದೆ.

ಕೂಡಲೇ ಸ್ಥಳೀಯರು ರಕ್ಷಣೆಗೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
30ಕ್ಕೂ ಅಧಿಕ ವರ್ಷದಲ್ಲೇ ಮೊದಲ ಬಾರಿಗೆ ಬೀದರ್‌ನ ಜೀವನದಿ ಮಾಂಜ್ರಾ ಭಾಗಶಃ ಖಾಲಿ‌ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ತೆರಳುವಾಗ ಕಾರು ಅಪಘಾತ – BSNL ನಿವೃತ್ತ ನೌಕರ ದುರ್ಮರಣಕೆಪಿಎಸ್‌ಸಿ ನಲ್ಲಿ ಹುದ್ದೆಗಾಗಿ ಡೀಲಿಂಗ್‌ ಪ್ರಕರಣ – 3 FIR ದಾಖಲು, 2 ಕೇಸ್‌ ಸಿಐಡಿಗೆ ವರ್ಗಮದ್ವೆಗೆ ನಿರಾಕರಿಸಿದ್ದಕ್ಕೆ ಬೈಕ್ ತಡೆದಿದ್ದ ಪ್ರೇಯಸಿ – ಹ್ಯಾಂಡಲ್‌ಗೆ ಜೋತುಬೀಳಿಸಿಕೊಂಡೇ ರಸ್ತೆಯಲ್ಲಿ ಎಳೆದೊಯ್ದ ಪ್ರಿಯಕರಹೈದ್ರಾಬಾದ್ ಡ್ರಗ್ಸ್ ಕೇಸ್‌ಗೂ ಬೆಂಗಳೂರಿಗೂ ಲಿಂಕ್ – ನಗರದ 2 ಕಡೆ ಇಡಿ ದಾಳಿಕಾಲುವೆ ನೀರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ – ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶಪತ್ನಿಗೆ ನೇಣು ಹಾಕಿ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್‌ ಮಾಡಿ ತೋರಿಸಿದ ಸೈಕೋ ಪತಿತಮಿಳುನಾಡಿಗೆ ನೀರು ಬಿಡಲು ಆದೇಶ; ಸರ್ವಪಕ್ಷ ಸಭೆ ಕರೆಯಲಿ: ಆರ್. ಅಶೋಕ್‌ಎಸ್‌ಐಆರ್ 3 ತಿಂಗಳು ವಿಸ್ತರಿಸಿ – ದೇವನೂರು, ಗುಹಾ ಸಲ್ಲಿಸಿದ್ದ PIL ವಜಾಪ್ರಧಾನ್‌ ಅವರನ್ನು ಹುದ್ದೆಯಿಂದ ತೆಗೆಯುವ ಮೂಲಕ ಪ್ರಧಾನಿಯನ್ನು ಬಚಾವ್‌ ಮಾಡಿದೆ: ಅಖಿಲೇಶ್‌ ಯಾದವ್‌