ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಈಚನಾಳದಲ್ಲಿ ಹಾಸ್ಟೆಲ್ ವಾರ್ಡನ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ. ಈಚನಾಳ ಗ್ರಾಮದ ಮಲ್ಲರೆಡ್ಡೆಪ್ಪ ಬಂಧಿತ ಆರೋಪಿ.
ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಪರಿಶೀಲನೆಗೆ ಅಧಿಕಾರಿಗಳ ಜೊತೆ ಬಂದಿದ್ದ ಕರಡಕಲ್ ಬಾಲಕರ ವಸತಿನಿಲಯದ ಕಿರಿಯ ವಾರ್ಡನ್ ಶರಣಪ್ಪ ಜೊತೆ ಖ್ಯಾತೆ ತೆಗೆದು ಈಚನಾಳ ಗ್ರಾಮದ ಮಲ್ಲರೆಡ್ಡೆಪ್ಪ ಹಲ್ಲೆ ಮಾಡಿದ್ದ. ವೀಡಿಯೋ ಚಿತ್ರೀಕರಣ ಮಾಡದಂತೆ ತಡೆದಿದ್ದಕ್ಕೆ ಹಲ್ಲೆ ಮಾಡಿದ್ದ ಯುವಕ, ವಾರ್ಡನ್‌ನ ಗಾಯಗೊಳಿಸಿದ್ದ. ಘಟನೆ ಹಿನ್ನೆಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನ ಬಳಿಕ ಆರೋಪಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆರೋಪಿಯನ್ನ ಕೂಡಲೇ ಬಂಧಿಸುವಂತೆ ಸರ್ಕಾರಿ ನೌಕರರ ಸಂಘ ಪ್ರತಿಭಟನೆ ನಡೆಸಿ, ಲಿಂಗಸುಗೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಆರೋಪಿ ಮಲ್ಲರೆಡ್ಡಪ್ಪ ಸಹ ಲಿಂಗಸುಗೂರು ಠಾಣೆಯಲ್ಲಿ ಕಿರಿಯ ವಾರ್ಡನ್ ಶರಣಪ್ಪ ವಿರುದ್ಧ ಪ್ರತಿದೂರು ದಾಖಲಿಸಿದ್ದಾನೆ.