ವಿಜಯಪುರ: ನಗರದ ನವಭಾಗ್ ರಸ್ತೆಯಲ್ಲಿರೋ ಫಿಶ್ ಟನಲ್ ಎಕ್ಪೋದಲ್ಲಿ ಅವಘಡವೊಂದು ಸಂಭವಿಸಿದೆ. ಫಿಶ್ ಟನಲ್ ಎಕ್ಸ್ಪೋದಲ್ಲಿ ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ನಿಖಿತಾ ಬಿರಾದಾರ್ ಎನ್ನುವ ಯುವತಿ ಎಂದು ಗುರುತಿಸಲಾಗಿದೆ. ರೇಂಜರ್ ಸ್ವಿಂಗ್ನಲ್ಲಿ ಕುಳಿತಾಗಲೇ ನಿಖಿತಾಗೆ ಹಾಕಿದ್ದ ಬೆಲ್ಟ್ ಸರಿಯಾಗಿದೆಯಾ ಎಂದು ಆಕೆಯ ತಾಯಿ ಆಪರೇಟರ್ಗೆ ಪ್ರಶ್ನಿಸಿದ್ದಳು. ಅದಕ್ಕೆ ಆತ ಎಲ್ಲಾ ಓಕೆ ಎಂದಿದ್ದ. ಅಲ್ಲದೇ ಸ್ವಲ್ಪ ಸಮಯದ ಬಳಿಕ ಸಾಕು ನಿಲ್ಲಿಸಿ ನಿಲ್ಲಿಸಿ ಎಂದು ಆಪರೇಟರ್ ಬಳಿ ನಿಖಿತಾ ತಾಯಿ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆದ್ರೆ, ಆಪರೇಟರ್ ಅದ್ಯಾವುದನ್ನೂ ಕೇಳಿಸಿಕೊಳ್ಳದೇ ಸುಮ್ಮನಾಗಿದ್ದಾನೆ. ಆಗ ನಿಖಿತಾಗೆ ಹಾಕಿದ್ದ ಬೆಲ್ಟ್ ಕಟ್ ಆಗಿ ಆಕೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ.
ಜಿಲ್ಲೆಯ ನವಭಾಗ್ ರಸ್ತೆಯ ಫಿಶ್ ಟನಲ್ ಎಕ್ಸ್ಪೋದಲ್ಲಿ ತಲೆ ಕೆಲಗಾಗಿ ತಿರುಗಿಸೋ ಸುನಾಮಿಯಲ್ಲಿ ಕುಳಿತಿದ್ದ ಯುವತಿ ಕಳಪೆ ಬೆಲ್ಟ್ ಹಾಕಿದ್ದ ಪರಿಣಾಮ ಕೆಳಗೆ ಬಿದ್ದು ಸಾವಿನ ಮನೆ ಸೇರಿದ್ದಾಳೆ. ಇಲ್ಲಿ ಫೀಶ್ ಟನಲ್ ಎಕ್ಪೋ ಜೊತೆಗೆ ಇತರೆ ರೋಮಾಂಚನಕಾರಿ ಆಟಗಳನ್ನು ಆಡುವ ಇವೆಂಟ್ ಗಳನ್ನು ಸಹ ಆಯೋಜಿಸಲಾಗಿದೆ. ಈ ಪೈಕಿ ದೊಡ್ಡ ರಾಟೆ ಆಂದರೆ ಚಕ್ರ, ಡ್ಯಾಶಿಂಗ್ ಕಾರ್, ಜಿಗ ಜಾಗ್, ಸುನಾಮಿ ಹೆಸರಿನ ರೇಂಜರ್ ಸ್ವಿಂಗ್ ಸೇರಿದಂತೆ ಇತರೆ ಮನರಂಜನೆ ಹಾಗೂ ಸಾಹಸಿ ಆಟಗಳನ್ನು ಇಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಶುಲ್ಕವನ್ನು ನೀಡಬೇಕು. ಇಂತಹ ಫೀಶ್ ಟನಲ್ ಎಕ್ಪೋಕ್ಕೆ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಶಿಕ್ಷಕ ಅರವಿಂದ ಬಿರಾದಾರ ಪತ್ನಿ ಗೀತಾ ಪುತ್ರಿ ಜಿಖಿತಾ ಹಾಗೂ ನೆರಯ ಮನೆ ಮಂದಿ ಜೊತೆಗೆ ಕಳೆದ ಅಕ್ಟೋಬರ್ 20 ರಂದು ಆಗಮಿಸಿದ್ದರು.
ಈ ವೇಳೆ ನಿಖಿತಾ ಹಾಗೂ ಆಕೆಯ ಇಬ್ಬರು ಗೆಳೆತಿಯರು ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದರು. ತಲೆ ಕೆಳಗಾಗಿ ತಿರುಗಿಸೋ ರೇಂಜರ್ ಸ್ವಿಂಗ್ ನಲ್ಲಿ ಕುಳಿತುಕೊಳ್ಳುವಾಗಲೇ ನಿಖಿತಾ ತಾಯಿ ಗೀತಾ ಬಿರಾದಾರ್ ಆಪರೇಟರ್ ಗೆ ಬೆಲ್ಟ್ ಹಾಗೂ ಇತರೆ ಸುರಕ್ಷತಾ ಸಾಧನಗಳು ಸರಿಯಾಗಿವೆಯಾ ಎಂದು ಪ್ರಶ್ನೆ ಮಾಡಿದ್ದರು. ಆಗ ಆರಪೇಟರ್ ರಮೇಶ ರಾಯ್ ಎಲ್ಲ ಸರಿಯಾಗಿದೆ ಎಂದು ಹೇಳಿದ್ದ. ರೇಂಜರ್ ಸ್ವಿಂಗ್ ಆರಂಭವಾಗುತ್ತಿದ್ದಂತೆ ನಿಖಿತಾ ಕುಟುಂಬದವರು ಹಾಗು ಆಕೆ ಗೆಳತಿ ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದವರ ವಿಡಿಯೋ ಮಾಡುತ್ತಿದ್ದರು. ರೇಂಜರ್ ಸ್ವಿಂಗ್ ಆನ್ ಆಗಿ ತೆಲೆ ಕೆಳಗಾಗಿ ಮಾಡುತ್ತಿದ್ದಂತೆ ಅದರಲ್ಲಿದ್ದವರು ಭಯದಿಂದ ಕಿರುಚಾಡಿದರು. ಆಗ ನಿಖಿತಾ ತಾಯಿ ಎಲ್ಲರೂ ಭಯಗೊಂಡಿದ್ದಾರೆ. ರೇಂಜರ್ ಸ್ವಿಂಗ್ ಬಂದ್ ಮಾಡಿ ಎಂದು ಆಪರೇಟರ್ ಗೆ ಪರಿ ಪರಿಯಾಗಿ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಆವರ ಮಾತನ್ನು ಆಪರೇಟರ್ ರಮೇಶ್ ರಾಯ್ ಕೇಳಿಲ್ಲ. ಇದೇ ವೇಳೆ ನಿಖಿತಾಗೆ ಹಾಕಿದ್ದ ಸೇಪ್ಟಿ ಬೆಲ್ಟ್ ಸಡಿಲಾಗಿ ಆಕೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ಈ ಹಿನ್ನೆಲೆಯಲ್ಲಿ ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ನಿಖಿತಾ ಸಾವನ್ನಪ್ಪಿದ್ದಾಳೆ. ಇದಕ್ಕೆ ಫೀಶ್ ಟನಲ್ ಎಕ್ಪೋ ಮ್ಯಾನೇಜ್ಮೆಂಟ್ ನಿರ್ಲಕ್ಷ್ಯ ಎಂದು ಆರೋಪಿಸಲಾಗಿದೆ.