ಬೆಂಗಳೂರು: ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ನರೇಂದ್ರ ಮೋದಿ ಸಿಲಿಂಡರ್ ಬೆಲೆ 200 ರೂ. ಇಳಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಈ ದೇಶದ ಹೆಣ್ಣು ಮಕ್ಕಳು ಕರ್ನಾಟಕದ ಮಾದರಿ ನೋಡ್ತಿದ್ದಾರೆ. 500ರೂ. ಗೆ ಗ್ಯಾಸ್ ಸಿಲಿಂಡರ್ ಕೊಡಬೇಕು ಅಂತ ಹೇಳಿದ್ದೆವು. ಈಗ ನಾವು 2 ಸಾವಿರ ಕೊಡ್ತಿದ್ದೀವಿ ಎಂದರು.
ಹೆಣ್ಣು ಮಕ್ಕಳ ಅಕೌಂಟಿಗೆ ಹಣ ಹೋಗಲಿದೆ. ನೂರು ದಿನದ ಸಂಭ್ರಮ ಆಚರಿಸುತ್ತಿದ್ದೇವೆ. ನಾಡಿನ ಯಾವ ಮತದಾರ ಆಚರಣೆ ಮಾಡುತ್ತಿದ್ದಾರೆ. ನಾಡಿನ ಎಲ್ಲಾ ಹೆಣ್ಣು ಮಕ್ಕಳ ಮನೆಗೆ ಹಣ ತಲುಪುತ್ತಿದೆ. ಸಿದ್ದರಾಮಯ್ಯ, ನಾನು ಚೆಕ್‍ಗೆ ಸಹಿ ಹಾಕಿದ್ದೆವು. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಬರುತ್ತಿದ್ದಾರೆ. ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
12 ಲಕ್ಷಕ್ಕೂ ಹೆಚ್ಚು ಕಡೆ ಝೂಮ್ ಮೀಟಿಂಗ್ ನಡೆಯಲಿದೆ. 1.10 ಕೋಟಿ ಹೆಣ್ಣು ಮಕ್ಕಳು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಪ್ರೈಮ್ ಮಿನಿಸ್ಟರ್ ಅವರು ಉಚಿತ ಯೋಜನೆ ಇಂದ ದಿವಾಳಿ ಆಗುತ್ತೆ ಎಂದು ಹೇಳಿದ್ದರು. ಮಹಾರಾಷ್ಟ್ರದಲ್ಲಿ ಯಾಕೆ 1,500 ಕೊಡುತ್ತಿದ್ದಾರೆ. ಕರ್ನಾಟಕದಲ್ಲಿ ಕೊಡ್ತಿದ್ದಾರೆ, ನಮ್ಮಲ್ಲಿ ಯಾಕಿಲ್ಲ ಅಂತ ಎಲ್ಲೆಡೆ ಬೈಯುತ್ತಿದ್ದಾರೆ ಎಮದು ವಾಗ್ದಾಳಿ ನಡೆಸಿದರು.