ರಾಯಚೂರು: ಪಂಚಮಸಾಲಿ 2ಎ ಮೀಸಲಾತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರೋಧಿಸುತ್ತಿದ್ದಾರೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಸುಗೂರು ತಾಲ್ಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿರುಪತಿಯಲ್ಲಿ ಒಳ ಒಪ್ಪಂದ ಮಾಡಿಕೊಂಡಿರುವ ವಿಷಯ ಗಮನಕ್ಕೆ ಬಂದಿದೆ ಎಂದರು.
ತಿರುಪತಿಯಲ್ಲಿ ಆಗಿರುವ ಮಾತುಕತೆ ಸಂಬಂಧಿಸಿ ಶೀಘ್ರದಲ್ಲಿಯೆ ಅಧಿಕೃತ ಆಡಿಯೊ ಅಥವಾ ವಿಡಿಯೊ ಬಹಿರಂಗ ಪಡಿಸುತ್ತೇವೆ.
ಡಿಸೆಂಬರ್ 12ರೊಳಗಡೆ ಮೀಸಲಾತಿ ಘೋಷಿಸದೆ ಹೋದಲ್ಲಿ ಯಡಿಯೂರಪ್ಪ ವಿರುದ್ದವೆ ರಾಜ್ಯವ್ಯಾಪಿ ಪ್ರತ್ಯೇಕ ಹೋರಾಟ ರೂಪಿಸಲಾಗುವುದು ಎಂದರು.