ಯಾದಗಿರಿ: ನಮಗೆ ಖಡ್ಗ ತೋರಿಸುತ್ತೀರಾ? ನಮ್ಮವರು ಖಡ್ಗ ತೆಗೆದುಕೊಂಡರೆ ಡೈರೆಕ್ಟ್ ಆಗಿ ಪಾಕಿಸ್ತಾನಕ್ಕೆ ಹೋಗುತ್ತೀರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಯಾದಗಿರಿಯ ಶಹಾಪುರದಲ್ಲಿ ಹಿಂದೂ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಮಾತನಾಡಿದ ಶಾಸಕ ಯತ್ನಾಳ್, ನೀವು ತಾಲಿಬಾನ್‌ಗಳಿಗೆ ಸಪೋರ್ಟ್ ಮಾಡುವ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ನಾವು ಶಾಂತಿಯುತ ಗಣೇಶ ವಿಸರ್ಜನೆ ಮಾಡುತ್ತಿದ್ದೇವೆ. ಆದರೆ ಕೋಲಾರದಲ್ಲಿ ಖಡ್ಗ ಪ್ರದರ್ಶನ ಮಾಡಿದರು. ಶಿವಮೊಗ್ಗದಲ್ಲಿ ಔರಂಗಜೇಬ್, ಟಿಪ್ಪುವಿನ ಭಾವಚಿತ್ರ ಹಾಕಿ ನಮ್ಮ ಸಮಾಜಕ್ಕೆ ಸವಾಲು ಹಾಕಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ಪರ ಸರ್ಕಾರವಿದೆ. ನಮಗೆ ಖಡ್ಗ ತೊರಿಸುತ್ತೀರಾ? ನಮ್ಮವರು ಖಡ್ಗ ತೆಗೆದುಕೊಂಡರೆ ಡೈರೆಕ್ಟ್ ಪಾಕಿಸ್ತಾನಕ್ಕೆ ಹೋಗುತ್ತೀರಿ. ಸನಾತನ ಧರ್ಮ ಎಲ್ಲಿಯವರೆಗೆ ಇರುತ್ತದೆ ಅಂಬೇಡ್ಕರ್ ಅವರ ಸಂವಿಧಾನ ಇರುತ್ತದೆ ಎಂದು ಹೇಳಿದರು.