Ad imageAd image

ಯಶವಂತಪುರ-ಪಂಡರಪುರ ಎಕ್ಸಪ್ರೆಸ್ ರೈಲನ್ನು ಘಟಪ್ರಭಾ ಹಾಗೂ ರಾಯಬಾಗ ನಿಲ್ದಾಣಗಳಿಗೆ ನಿಲುಗಡೆ ಆದೇಶ

ratnakar
ಯಶವಂತಪುರ-ಪಂಡರಪುರ ಎಕ್ಸಪ್ರೆಸ್ ರೈಲನ್ನು ಘಟಪ್ರಭಾ ಹಾಗೂ ರಾಯಬಾಗ ನಿಲ್ದಾಣಗಳಿಗೆ ನಿಲುಗಡೆ ಆದೇಶ
WhatsApp Group Join Now
Telegram Group Join Now

ಬೆಳಗಾವಿ: ಪಂಢರಪುರದ ಪಾಂಡುರಂಗನ ದರ್ಶನಕ್ಕೆ ತೆರಳುವ ಜಿಲ್ಲೆಯ ಭಕ್ತರ ಬಹುದಿನಗಳ ಬೇಡಿಕೆಯಾಗಿದ್ದ ಯಶವಂತಪುರ-ಪಂಡರಪುರ ಎಕ್ಸಪ್ರೆಸ್ ರೈಲನ್ನು ಘಟಪ್ರಭಾ ಹಾಗೂ ರಾಯಬಾಗ ನಿಲ್ದಾಣಗಳಿಗೆ ನಿಲುಗಡೆ ಕಲ್ಪಸುವಂತೆ ಕೇಂದ್ರ ರೈಲ್ವೆ ಸಚಿವರನ್ನು ವಿನಂತಿಸಲಾಗಿತ್ತು. ನನ್ನ ಮನವಿಯನ್ನು ಪರಿಗಣಿಸಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಭಾಗದ ಭಕ್ತರಿಗೆ ಅನುಕೂಲ ಕಲ್ಪಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿ ಘಟಪ್ರಭಾ ಮತ್ತು ರಾಯಬಾಗ ನಿಲ್ದಾಣಗಳಲ್ಲಿ ನಿಲುಗಡೆಗೆ ಆದೇಶ ಮಾಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಬುಧವಾರ ಆ-14 ರಂದು ನವದೆಹಲಿಯ ರೈಲು ಭವನದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ, ನಿಲುಗಡೆ ಆದೇಶ ಪತ್ರಿಯನ್ನು ಪಡೆದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ರೈಲು ಸಂಖ್ಯೆ 16541 ಯಶವಂತಪುರ-ಪಂಡರಪೂರ ಹಾಗೂ ರೈಲು ಸಂಖ್ಯೆ 16542 ಪಂಡರಪೂರ-ಯಶವಂತಪುರ ಈ ರೈಲು ಘಟಪ್ರಭಾ ಹಾಗೂ ರಾಯಬಾಗ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಪಂಢರಪುರಕ್ಕೆ ಹೊಗುವ ಪ್ರಯಾಣಿಕರು ಈ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಕೊಳ್ಳಬೇಕು. ನನ್ನ ಮನವಿಗೆ ಸ್ಪಂದಿಸಿ ಘಟಪ್ರಭಾ ಮತ್ತು ರಾಯಬಾಗ ನಿಲ್ದಾಣಗಳಲ್ಲಿ ನಿಲುಗಡೆಗೆ ಆದೇಶ ನೀಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಈ ಭಾಗದ ಜನತೆಯ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.

WhatsApp Group Join Now
Telegram Group Join Now
Share This Article