ಲಕ್ನೋ: ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರಿಗಾಗಿ ಯಮರಾಜ ಕಾಯುತ್ತಿದ್ದಾನೆ ಎಂದು ಕಿಡೆಗೇಡಿಗಳಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿಚಾರವಾಗಿ ಅವರು ಗುಡುಗಿದ್ದಾರೆ. ಇತ್ತೀಚೆಗೆ ಅಲ್ಲಿನ ಅಂಬೇಡ್ಕರ್ ನಗರದಲ್ಲಿ ಮೂವರು ಕಿಡಿಗೇಡಿಗಳು ಸೈಕ್‍ಲ್‍ನಲ್ಲಿ ತೆರಳುತ್ತಿದ್ದ ಬಾಲಕಿಯರ ದುಪ್ಪಟ್ಟಾ ಎಳೆದು ಕೆಡವಿ ಇಬ್ಬರ ಸಾವಿಗೆ ಕಾರಣರಾಗಿದ್ದರು. ಇದನ್ನು ಉಲ್ಲೇಖಿಸಿ ಅವರು ಮಾತನಾಡಿದ್ದಾರೆ. ಈ ವೇಳೆ ಮಹಿಳೆಯರಿಗೆ ತೊಂದರೆ ಕೊಡುವವರಿಗೆ ಯಮ ಅಂತವರಿಗೆ ಕಾದು ಕುಳಿತಿದ್ದಾನೆ ಎಂದು ಎಚ್ಚರಿಸಿದ್ದಾರೆ.