ಯಮಕನಮರಡಿ: ಮತಕ್ಷೇತ್ರದ ಹಂಚಿನಾಳ ಗ್ರಾಮದಲ್ಲಿ ಹುಕ್ಕೇರಿ ತಾಲೂಕಿನ ಯಮಕನಮರಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಊರಿನ ಹಿರಿಯರಾದ ಮಲ್ಲಪ್ಪ ಮುಗಳಿ, ರಾಜು ರೇವಣ್ಣವರು, ಟಿ.ಡಿ.ಜಕ್ಕಪ್ಪಗೋಳ, ಆಗಮಿಸಿದ್ದರು.
ಉದ್ಘಾಟಕರಾಗಿ ಆಗಮಿಸಿದ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರು, ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ಅಣ್ಣಾ ಜಾರಕಿಹೊಳಿ ಅವರ ಶೈಕ್ಷಣಿಕ ಆಪ್ತ ಸಹಾಯಕರಾದ ಜಂಗ್ಲೀಸಾಬ ನಾಯಿಕ ಸರ್ ಅವರು ಸಚಿವರ ಸೂಚನೆ ಮೇರೆಗೆ ಯಮಕನಮರಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ವೇದಿಕೆ ಮೇಲೆ ಇರುವ ಎಲ್ಲ ಗಣ್ಯ ಮಾನ್ಯರು. ಶಾಲಾ ವಿದ್ಯಾರ್ಥಿಗಳ ಜೊತೆ ಸೇರಿ ಉದ್ಘಾಟಿಸಿದ್ದರು.
ನಂತರ ವಿದ್ಯಾರ್ಥಿಗಳ ಕುರಿತು ಆಪ್ತ ಸಹಾಯಕರು ಭಾಷಣ ಮಾಡಿದರು, ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ:-ಪ್ರಭಾವತಿ ಪಾಟೀಲ್ ಮೇಡಮ್ ಅವರು ಕೂಡ ವಿದ್ಯಾರ್ಥಿಗಳ ಕುರಿತು ವಿದ್ಯಾರ್ಥಿ ಜೀವನದ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ಅಚ್ಚುಕಟ್ಟಾಗಿ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಹಾಗೂ ಹಂಚಿನಾಳ ಗ್ರಾಮದ ಎಲ್ಲ ಗುರು ಹಿರಿಯರು ಮತ್ತು ವಲಯ ಮಟ್ಟದ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.