spot_img
spot_img
spot_img
18.7 C
Belagavi
Monday, September 26, 2022
spot_img

ಇಂದು ವಿಶ್ವ ಮಹಿಳಾ ದಿನಾಚರಣೆ : ಹೆಣ್ತನದ ಹಲವು ವೈಶಿಷ್ಟ್ಯಗಳು 

spot_img
spot_img

For Breaking News Download App

ಬೆಂಗಳೂರು : ಹೆಣ್ಣು ಇಲ್ಲದೇ ಜಾಗವಿಲ್ಲ, ಹೆಣ್ಣೆ ಜಗತ್ತಿನ ಆಧಾರ, ಹೀಗಾಗಿ ಪ್ರತಿ ವರ್ಷ ಮಾರ್ಚ್​ 8ರಂದು ವಿಶ್ವಾದ್ಯಂತ ಮಹಿಳಾ ದಿನವನ್ನ ಆಚರಣೆ ಮಾಡಲಾಗುತ್ತೆ. ಈ ದಿನದಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನ ಸ್ಮರಿಸಲಾಗುತ್ತೆ. ಮಹಿಳೆಯ ಅಭಿವೃದ್ಧಿ ಹಾಗೂ ಸಮಾನತೆಗಾಗಿ ವಿಶ್ವದಾದ್ಯಂತ ಈ ದಿನವನ್ನ ಆಚರಣೆ ಮಾಡಲಾಗುತ್ತದೆ.

ಪ್ರತಿ ವರ್ಷ ಮಹಿಳಾ ದಿನವನ್ನ ಒಂದೊಂದು ವಿಶೇಷ ಅರ್ಥವನ್ನ ಇಟ್ಟುಕೊಂಡು ಆಚರಣೆ ಮಾಡಲಾಗುತ್ತೆ. ಈ ವರ್ಷ ‘ಸವಾಲುಗಳಿಗೆ ನಾವು ಸಿದ್ಧ’ ಎಂಬ ಥೀಮ್​ನ ಅಡಿಯಲ್ಲಿ ಮಹಿಳಾ ದಿನವನ್ನ ಆಚರಿಸಲಾಗ್ತಾ ಇದೆ. ಕೊರೊನಾದಿಂದಾಗಿ ಎದುರಾದ ಸವಾಲುಗಳನ್ನ ಎದುರಿಸುವ ವಿಚಾರವಾಗಿ ಈ ಘೋಷ ವಾಕ್ಯವನ್ನ ಆಯ್ಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶತಮಾನಗಳ ಇತಿಹಾಸವೇ ಇದೆ. 1857ರ ಮಾರ್ಚ್​ 8ರಂದು ನ್ಯೂಯಾರ್ಕ್​ನಲ್ಲಿ ನಡೆದಿದ್ದ ಗಾರ್ಮೆಂಟ್​​ನ ಮಹಿಳಾ ಕಾರ್ಮಿಕರು ನಡೆಸಿದ್ದ ಪ್ರತಿಭಟನೆ ಸ್ಮರಣಾರ್ಥ 1909 ಫೆಬ್ರವರಿ 28ರಂದು ನ್ಯೂಯಾರ್ಕ್ ಮೊಟ್ಟ ಮೊದಲ ಮಹಿಳಾ ದಿನವನ್ನ ಆಚರಣೆ ಮಾಡಿದೆ.

ಇದಾದ ಬಳಿಕ 1910ರಲ್ಲಿ ಡೆನ್ಮಾರ್ಕ್​ನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ವಕೀಲೆ ಕ್ಲಾರಾ ಜಟ್ಕಿನ್​ ಎಂಬಾಕೆ ಮಾರ್ಚ್​ 8ರಂದು ಮಹಿಳಾ ದಿನ ಆಚರಿಸುವಂತೆ ಬೇಡಿಕೆ ಇಟ್ಟರು. ಇದಕ್ಕೆ ವಿಶ್ವದ ಎಲ್ಲಾ ರಾಷ್ಟ್ರಗಳ ಒಪ್ಪಿಗೆ ಕೂಡ ದಕ್ಕಿತು.

ಅಂದಿನಿಂದ ಮಹಿಳೆಯ ಅಭಿವೃದ್ಧಿ, ಶೋಷಣೆಯ ವಿರುದ್ಧ ಹೋರಾಟ, ಲಿಂಗ ಸಮಾನತೆಯ ಉದ್ದೇಶದಿಂದ ಮಹಿಳಾ ದಿನವನ್ನ ಆಚರಣೆ ಮಾಡಲಾಗುತ್ತಿದೆ. ಆದರೂ ಇಂದಿಗೂ ಹಲವಾರು ಸಮಸ್ಯೆಗಳನ್ನು, ಸವಾಲುಗಳನ್ನು ದಾಟಿ ಹೆಣ್ಣು ಕುಲ ಹೆಜ್ಜೆಇಡುತ್ತಿದೆ.

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -