ಬೆಳಗಾವಿ: ವಿಶ್ವ ಖಾತ್ಯ ಹಾಗೂ ಗಿನಿಶ್ ದಾಖಲೆ ಸೃಷ್ಟಿಸಿದ ಪುಟ್ಬಾಲ್ ಆಟಗಾರ ಜಿಮ್ಮಿ ಕ್ಯಾಟ್ ಶಾಲಾ ಮಕ್ಕಳಿಗೆ ಫುಟ್ಬಾಲ್ ತರಬೇತಿ ಹಾಗೂ ಕ್ರೀಡೆಯ ಕುರಿತು ಆಸಕ್ತಿ ಮೂಡಿಸಲು ಪೋತದಾರ್ ಶಿಕ್ಷಣ ಸಂಸ್ಥೆ ಶಾಲೆ ಮಕ್ಕಳಿಗೆ ಫುಟ್ಬಾಲ್ ತರಬೇತಿ ನೀಡುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಿನ್ಸಿಪಾಲ್ ಅವರು ತಮ್ಮ ಪ್ಯಾನಿಕ್ ಇಂಡಿಯಾ 140 ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಲೆಗಳನ್ನು ಹೊಂದಿದ್ದು ಅದರಲ್ಲಿ ಬೆಳಗಾವಿ ಕೂಡ ಒಂದು. 1927 ರಲ್ಲಿ ಸ್ಥಾಪನೆಗೊಂಡ ಪೋತದಾರ್ ಅಂತರಾಷ್ಟ್ರೀಯ ಶಾಲೆ ಶತಮಾನೋತ್ಸವದ ಸನ್ನಿಯದಲ್ಲಿದ್ದೇವೆ, ಎಲ್ಲಾ ರಂಗದಲ್ಲಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ವಿಶೇಷವಾಗಿ ಕ್ರೀಡೆಗೆ ಹೆಚ್ಚಿನ ಆಸಕ್ತಿ ನೀಡಿದ್ದೇವೆ. ಖಾತ್ಯ ಕ್ರೀಡಾಪಟುಗಳಾದ ಜಿಮ್ಮಿ ಕ್ಯಾಟ್ಸ ಅವರಿಂದ ನಮ್ಮ ಶಾಲಾ ಮಕ್ಕಳು ಫುಟ್ಬಾಲ್ ತರಬೇತಿ ಪಡೆಯುತ್ತಿದ್ದಾರೆ.
ಜಿಮ್ಮಿ ಕ್ಯಾಟ್ಸ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಮಕ್ಕಳೊಂದಿಗೆ ಫುಟ್ಬಾಲ್ ಕುರಿತು ಹೆಚ್ಚಿನ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇನೆ ನನಗೆ ಇಲ್ಲಿ ಸಂತೋಷವಾಗಿದೆ ಮಕ್ಕಳೊಂದಿಗೆ ಆಟವಾಡುತ್ತಾ ಇದ್ದೇನೆ ಎಂದು ತಿಳಿಸಿದರು.