ಕವಿತಾಳ: ಕವಿತಾಳ ಸಮೀಪದ ಹರ್ವಾಪುರ್ ಗ್ರಾಮದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ವೆಂಕಟೇಶ್ ಮಾತನಾಡಿ ಸಾರ್ವಜನಿಕರು ಏಡ್ಸ್ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಸಮಾನಗೊಳಿಸು ನಮ್ಮೆಲ್ಲರ ಪ್ರಾಮಾಣ ಕ ಪ್ರಯತ್ನದಿಂದ ಅಸಮಾನತೆಯನ್ನು ಪರಿಹರಿಸೋಣ ಮತ್ತು ಏಡ್ಸ್ ಅನ್ನು ಕೊನೆಗೊಳಿಸೋಣ ಎನ್ನುವುದು ಪ್ರಸಕ್ತ ವರ್ಷದ ವಿಶ್ವ ಏಡ್ಸ್ ದಿನಾಚರಣೆ ಘೋಷವಾಕ್ಯವಾಗಿದೆ.
ಎಡ್ಸ್ ಸೊಂಕಿಗೆ ಜಾತಿ ಲಿಂಗ ವಯಸ್ಸಿನ ಭೇದ ಭಾವವಿಲ್ಲ ಜಾಗೃತಿ ವಹಿಸದಿದ್ದರೆ ಈ ಸೋಂಕು ಯಾರಿಗೆ ಬೇಕಾದರೂ ತಗುಲಹುದು, ಮತ್ತು ಅದಕ್ಕಾಗಿ ಕೂಡಲೇ ಎ???ವಿ ಪರೀಕ್ಷೆ ಮಾಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿರೀಕ್ಷಣಾಧಿಕಾರಿ ಸುಮಂಗಲ. ಸರಕಾರಿ ಶಾಲೆಯ ಶಿಕ್ಷಕರು ಶಿವಮ್ಮ . ಬಸವರಾಜ್. ಅಂಜುಮ್. ಕೃಷ್ಣಮೂರ್ತಿ. ಅಂಗನವಾಡಿ ಕಾರ್ಯಕರ್ತರಾದ ಪದ್ಮ. ಗಿರಿಜಾ. ಆಶಾ ಕಾರ್ಯಕರ್ತೆ ಅಮೃತ ಮತ್ತು ಶಾಲಾ ಮಕ್ಕಳು ಜಾಥಾದಲ್ಲಿ ಭಾಗವಹಿಸಿದರು.