spot_img
spot_img
spot_img
36.1 C
Belagavi
Tuesday, June 6, 2023
spot_img

ರಕ್ತದಾನದೊಂದಿಗೆ ಅಭಿಮಾನ ಮೆರೆದ ಕಾರ್ಮಿಕರು   

ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸವದತ್ತಿಯ ಹರ್ಷ ಸಕ್ಕರೆ ಕಾರ್ಖಾನೆಯಲ್ಲಿ ಬೆಳಗಾವಿಯ ಬ್ಲಡ್ ಸೆಂಟರ್ ಮತ್ತು ಡೈಗ್ನೊಸ್ಟಿಕ್ ಲ್ಯಾಬೋರೇಟರಿ ಸಂಸ್ಥೆ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.

ನಮ್ಮ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ವರ್ಗದವರು ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಸಾವಿರಾರು ಜನರಿಗೆ ರಕ್ತ ಪೂರೈಸುವ ಮೂಲಕ ಜೀವದಾನ ಮಾಡುವ ಕಾರ್ಯ ಪ್ರಶಂಸನೀಯವಾಗಿದೆ,” ಎಂದರು.

“ಕಾರ್ಮಿಕರ ಈ ರಕ್ತದಾನ ಶಿಬಿರ ನನ್ನ ಮೇಲೆ ಇಟ್ಟಂತಹ ಅವರ ಅಭಿಮಾನ ಹಾಗೂ ವಾತ್ಸಲ್ಯಭರಿತ ಪ್ರೀತಿಯನ್ನು ತೋರಿಸುತ್ತಿದೆ. ಅವರ ಈ ಸಮಾಜಮುಖಿ ಕಾರ್ಯಕ್ಕೆ ನನ್ನ ಹೃದಯಸ್ಪರ್ಶಿ ಸಲಾಂ,” ಎಂದು ಅವರು ಭಾವನಾತ್ಮಕತೆ ವ್ಯಕ್ತಪಡಿಸಿದರು.

 

ಈ ಸಂದರ್ಭದಲ್ಲಿ ಮೊದಗಾ ಪಿಕೆಪಿಎಸ್ ಅಧ್ಯಕ್ಷ ಗಂಗಣ್ಣ ಕಲ್ಲೂರ, ಮಹಾಂತೇಶ ಮತ್ತಿಕೊಪ್ಪ, ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಸದಾಶಿವ ಥೋರಾತ್, ಮುಖ್ಯ ಆಡಳಿತ ಅಧಿಕಾರಿ, ಯು ಸಿ ಚೌಕಿಮಠ, ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕ ಎನ್.ಎಂ. ಪಾಟೀಲ, ಉಮೇಶ ರಾಚಣ್ಣವರ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬೆಳಗಾವಿಯ ಲಕ್ಷ್ಮೀ ತಾಯಿ ಸೌಹಾರ್ದ ಸಹಕಾರಿ ಸಂಘದ  ಮುಖ್ಯ ಕಾರ್ಯ ನಿರ್ವಾಹಕ ಸಾಗರ ಇಂಗಳಗಿ ಮತ್ತು ನಿರ್ದೇಶಕರು, ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.

Related News

ಎಲ್ಲ ನಾಯಕರ ಸಹಮತದ ಆಧಾರದ ಮೇಲೆ ಬೆಳಗಾವಿ ಜಿಲ್ಲಾ ವಿಭಜನೆ ಆಗಬೇಕು

ಬೆಳಗಾವಿ: ಅಭಿವೃದ್ಧಿ ದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲಾ ವಿಭಜನೆ ಆಗಬೇಕು. ಆದರೆ ಜಿಲ್ಲೆಯ ಎಲ್ಲ ನಾಯಕರ ಸಹಮತದ ಆಧಾರದ ಮೇಲೆ ಜಿಲ್ಲಾ ವಿಭಜನೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ...

ಅಂತೆ ಕಂತೆಗಳಿಗೆ ಕಿವಿಗೊಡಬೇಡಿ, ಸರಕಾರ ನಿಮ್ಮ ಜೊತೆಗಿದೆ – ಜನರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಯ

ಬೆಳಗಾವಿ: ಭರವಸೆ ನೀಡಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು. ಯಾವುದೇ ಅಂತೆ ಕಂತೆಗಳಿಗೆ ಕಿವಿಗೊಡಬೇಡಿ. ಸರಕಾರ ನಿಮ್ಮ ಜೊತೆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರು ಮತ್ತು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -