ವರದಿ : ರತ್ನಾಕರ ಗೌಂಡಿ ಬೆಳಗಾವಿ
ಬೆಳಗಾವಿ : ನಗರದ ಸರ್ದಾರ್ ಗ್ರೌಂಡ್ ಅಲ್ಲಿ ಪ್ರೋತ್ಸಾಹೇ ಸಂಘಗಳ ಉತ್ಪನ್ನಗಳ ಮತ್ತು ಮಾರಾಟ ಮಳಿಗೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಮತ್ತು ಸ್ವಾವಲಂಬನೆ ಜೀವನವನ್ನು ಸಾಗಿಸಲು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ತ್ರೀ ಸಮರ್ಥ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಈ ಯೋಜನೆಯಿಂದ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಎರಡು ಸ್ವಸಹಾಯ ಸಂಘಗಳನ್ನು ಅಳವಡಿಸಿಕೊಂಡು, ಸಂಘಗಳಿಗೆ ತಲಾ ಒಂದು ಲಕ್ಷ ಹಾಗೂ ಬ್ಯಾಂಕಿನ ಸೌಲಭ್ಯಗಳನ್ನು ಒದಗಿಸುವುದಲ್ಲದೆ ಅವರ ಉತ್ಪಾದಿಸಿದ ಕರಕುಶಲಗಳಿಗೆ ಜಾಗತಿಕ ಮಟ್ಟದಲ್ಲಿ ಅವುಗಳನ್ನು ಪ್ರೋತ್ಸಾಹಿಸಿ ಗ್ರಾಮೀಣ ಮಹಿಳೆಯರ ಬದುಕಿಗೆ ಬಂದು ಉದ್ಯೋಗದ ಅವಕಾಶಗಳನ್ನು ಒದಗಿಸುವದು ಈ ಯೋಜನೆಯ ಗುರಿಯಾಗಿದೆ ಎಂದರು.
ಇದರಿಂದ 33 ಸಾವಿರಗಳ ಸ್ವಸಹಾಯ ಸಂಘಗಳು ಲಾಭ ಪಡೆದುಕೊಳ್ಳಲಿವೆ. 5 ಲಕ್ಷ ಹೆಣ್ಣು ಮಕ್ಕಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವ ಅಶ್ವಥ್ ನಾರಾಯಣ, ಬೆಳಗಾವಿ ಶಾಶ್ವತ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ನಿರ್ಮಾಪಕರು ಇಲಾಖೆ ಪ್ರಧಾನ ಕಾರ್ಯದರ್ಶಿ. ಡಾ. ಎಸ್ ಸೌಲಭ್ಯ ಪ್ರಸ್ತಾವಿಕ ಮಾತನಾಡಿದರು.