Ad imageAd image

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕಿಚ್ಚ ಸುದೀಪ್ ಇರ್ತಾರಾ ಅಥವಾ ಇಲ್ಲವಾ?

ratnakar
ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕಿಚ್ಚ ಸುದೀಪ್ ಇರ್ತಾರಾ ಅಥವಾ ಇಲ್ಲವಾ?
WhatsApp Group Join Now
Telegram Group Join Now

ಕಿಚ್ಚ ಸುದೀಪ್ (Sudeep) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ (biggboss) ಇರ್ತಾರಾ ಅಥವಾ ಇಲ್ಲವಾ ಎನ್ನುವುದು ಯಕ್ಷ ಪ್ರಶ್ನೆಯಾಗಿತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಪ್ರೋಮೋ ರಿಲೀಸ್ ಮಾಡಿದೆ. ಹಾಗಂತ ಈ ಪ್ರೋಮೋದಲ್ಲಿ(Promo) ಸುದೀಪ್ ಅವರ ಎಂಟ್ರಿ ಆಗಿಲ್ಲ. ಆದಾಗ್ಯೂ ಸುದೀಪ್ ಅವರು ಇರುತ್ತಾರೋ ಅಥವಾ ಇಲ್ಲವೋ ಎನ್ನುವ ವಿಚಾರಕ್ಕೆ ಸ್ಪಷ್ಟನೆ ಸಿಕ್ಕಂತೆ ಆಗಿದೆ.

ನಿರೂಪಕ ಸುದೀಪ್ ಅವರ ಸಿನಿಮಾ ಕೆಲಸಗಳಿಗೆ ಈ ಶೋ ಅಡಚಣೆ ಉಂಟುಮಾಡಿತ್ತು. ಎಲ್ಲೇ ಇದ್ದರೂ ಬಿಗ್ ಬಾಸ್​ಗಾಗಿ ಅವರು ಬೆಂಗಳೂರಿಗೆ ಬರಬೇಕಿತ್ತು. ಈಗ ಅವರು 2-3 ಸಿನಿಮಾಗಳನ್ನು ಒಟ್ಟೊಟ್ಟಿಗೆ ಶೂಟ್ ಮಾಡುವ ಆಲೋಚನೆಯಲ್ಲಿ ಇದ್ದಾರೆ. ಹೀಗಾಗಿ, ಅವರು ಬಿಗ್ ಬಾಸ್​ನಿಂದ ಹೊರಕ್ಕೆ ನಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ರೀತಿ ಆಗಿಲ್ಲ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಡೆಸಿಕೊಡಲಿದ್ದಾರೆ.

ಬಿಗ್ ಬಾಸ್’ ಪ್ರೋಮೋದಲ್ಲಿ ಲೋಗೋ ರಿವೀಲ್ ಮಾಡಲಾಗಿದೆ ಅಷ್ಟೇ. ಕ್ಯಾಪ್ಶನ್​ನಲ್ಲಿ ‘Kichcha Sudeep’ ಹ್ಯಾಶ್​ಟ್ಯಾಗ್ ಹಾಕಲಾಗಿದೆ. ಇದರಿಂದ ಸುದೀಪ್ ಅವರು ಇರೋದು ಪಕ್ಕಾ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

WhatsApp Group Join Now
Telegram Group Join Now
Share This Article