spot_img
spot_img
spot_img
28.1 C
Belagavi
Thursday, September 29, 2022
spot_img

ಗಂಡನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ ಹೆಂಡತಿ

spot_img

ಹಾಸನ: ಪತಿ ಅಕ್ರಮ ಸಂಬಂಧಕ್ಕೆ ಬೇಸತ್ತು ಆತನನ್ನು ಕೊಲೆ ಮಾಡಿ ನಂತರ ಸಹಜ ಸಾವು ಎಂದು ನಾಟಕವಾಡಿದ್ದ ಹೆಂಡತಿಯನ್ನು ಹಳ್ಳಿ ಮೈಸೂರು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 27ರ ರಾತ್ರಿ ಕುಡಿದು ಬಂದ ಪತಿ ರೇವಣ್ಣನ ಜೊತೆ ಆರೋಪಿ ಸುಕನ್ಯ ಜಗಳಕ್ಕಿಳಿದಿದ್ದಳು.

ಜಗಳ ಕೈಮಿರಿದ ಬಳಿಕ ಗಂಡನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದಳು. ಆದರೆ, ಮರುದಿನ ಬೆಳಗ್ಗೆ ತನ್ನ ಗಂಡನಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾಬನೆಂದು ನಾಟಕವಾಡಿದ್ದಳು. ಇನ್ನು ಇಬ್ಬರ ಜಗಳಕ್ಕೆ ಗಂಡನ ಅಕ್ರಮ ಸಂಬಂಧವೂ ಕಾರಣವೆಂದು ಎಂದು ಹೇಳಲಾಗುತ್ತಿದೆ.

8 ವರ್ಷದ ಹಿಂದೆ ಸುಕನ್ಯಾ ಮತ್ತು ರೇವಣ್ಣ ಪ್ರೀತಿಸಿ ಮದುವೆ ಆಗಿದ್ದರು. ಆದರೆ ರೇವಣ್ಣ ಅಡ್ಡದಾರಿ ಹಿಡಿದು ಇನ್ನೊಂದು ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದನಂತೆ ಇದರಿಂದ ಕೆಲ ವರ್ಷ ರೇವಣ್ಣ ಮನೆ ಬಿಟ್ಟು ಹೋಗಿದ್ದ. ಇತ್ತ ವೇಳೆ ಸುಕನ್ಯಾ ಕೂಡ ಇನ್ನೊರ್ವನ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ತುಂಬಾ ದಿನಗಳ ಬಳಿಕ ಸುಕನ್ಯಾ ರೇವಣ್ಣ ನಡುವೆ ಗಲಾಟೆ ನಡೆದಿದೆ. ಈ ವೇಳೆ ಆತನ ಮರ್ಮಾಂಗಕ್ಕೆ ಒದ್ದಿದ್ದರಿಂದ ರೇವಣ್ಣನ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಹೊಳೆನರಸೀಪುರದ ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_img

Related News

ತಾಳ್ಮೆ ಕಳೆದುಕೊಂಡು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ 

ಶಿವಮೊಗ್ಗ: ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಂಡು ಹುಚ್ಚುಚ್ಚರಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ತಲೆಕೆಟ್ಟಿದೆ....

ಯಾರ ಮೇಲೆ ಜಾಸ್ತಿ ಪ್ರೀತಿ ಇರುತ್ತೋ ಅವರ ಮೇಲೆ ರೈಡ್ ಮಾಡ್ತಾರೆ : ಡಿಕೆಶಿ 

ಬೆಂಗಳೂರು: ಈಗಾಗಲೇ ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -