2023 ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಿಜೆಪಿ ಈಗ ಸೋಲಿನ ವಿಮರ್ಶೆ ಮಾಡಲು ಕಾರ್ಯಕರ್ತರೊಂದಿಗೆ ಹಿರಿಯ ನಾಯಕರು ಸಭೆ ನಡೆಸಿದ್ದಾರೆ.

ಸಭೆಗಳಲ್ಲಿ ಕಾರ್ಯಕರ್ತರು ಆಕ್ರೋಶವನ್ನು ನಾಯಕರು ಎದುರುಗಡೆ ವ್ಯಕ್ತಪಡಿಸುತ್ತಿದು ನಾಯಕರಗಳ ಹೊಂದಾಣಿಕೆ ರಾಜಕಾರಣ ದಿಂದ ಕಾರ್ಯಕರ್ತರ ಆಸ್ಮಿತೆಗೆ ಧಕ್ಕೆ ತಂದಂತಾಗಿದೆ ಎಂದು ಆಕ್ರೋಶಕ್ಕೆ ಕಾರಣವಾಗಿದೆ,
ಕಾರ್ಯಕರ್ತರ ಸಮಸ್ಯೆ ಒಂದು ಕಡೆ ಆದರೆ, ಇನ್ನೊಂದು ಕಡೆ ನಾಯಕರಗಳ ಒಳ ಜಗಳದಿಂದಾಗಿ ಹಲವು ಕ್ಷೇತ್ರಗಳನ್ನು ಕಳೆದುಕೊಂಡಿದ್ದೇವೆ ಎಂದು ನಾಯಕರಗಳು ವೇದಿಕೆಯ ಮೇಲೆ ಒಬ್ಬರು ಇನ್ನೊಬ್ಬರಿಗೆ ಟಾಂಗ್ ನೀಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೌಹಾರ್ದತ್ತ ಭೇಟಿ ಕುರಿತು ಪಕ್ಷದ ಫೈಯರ್ ಬ್ರಾಂಡ್ ನಾಯಕ ಎಂದು ಗುರುತಿಸಿಕೊಂಡಿರುವ ವಿಜಯಪುರದ ಶಾಸಕ ಬಸವರಾಜ ಯತ್ನಾಳ ಅವರು ಬೆಳಗಾವಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಬಹಿರಂಗವಾಗಿಯೇ ವಿಷಯವನ್ನು ಪ್ರಸ್ತಾಪಿಸಿ ಬಸವರಾಜ್ ಬೊಮ್ಮಾಯಿ ಅವರಿಗೆ ಮುಜುಗರವನ್ನುಂಟು ಮಾಡಿದರು.

ಅಲ್ಲದೆ ಮಾಜಿ ಸಚಿವ ಮುರುಗೇಶ್ ನಿರಾಣಿ ಪರೋಕ್ಷವಾಗಿ ನನ್ನ ಸೋಲಿಸಲು ಪ್ರಯತ್ನದಲ್ಲಿದ್ದರೆಂದು ಮಾಜಿ ಸಚಿವರ ಹೆಸರು ಹೇಳದೆ ಪ್ರಸ್ತಾಪಿಸಿ ಸಂಪೂರ್ಣ ಸಭೆಯಲ್ಲಿ ಯತ್ನಾಳ್ ಕೇಂದ್ರ ಬಿಂದುವಾಗಿ ಬಿಟ್ಟರು. ಇದಕ್ಕೆ ಬೆಳಗಾವಿ ಮಾತ್ರ ಸಾಕ್ಷಿಯಾಗಲಿಲ್ಲ ಕರ್ನಾಟಕದ ಉದ್ದಕ್ಕೂ ನಡೆಯುತ್ತಿರುವ ಕಾರ್ಯಕರ್ತರ ಸಮಾವೇಶದಲ್ಲಿ ಕಾರ್ಯಕರ್ತರ ಆಕ್ರೋಶ ಹೊಂದಾಣಿಕೆ ರಾಜಕೀಯ ಕುರಿತು ವಾದ ವಿವಾದಗಳು ಕಂಡುಬರುತ್ತವೆ.
ಇದು ಒಂದು ವಿಷಯವಾದರೆ ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ನಾಯಕರಾದ ಕೆ ಎಚ್ ಈಶ್ವರಪ್ಪ ಕಾಂಗ್ರೆಸ್ ನಿಂದ ಬಂದಂತಹ ಶಾಸಕರ ಗಳಿಂದ ಪಕ್ಷದಲ್ಲಿ ಅತೃಪ್ತಿಯ ವಾತಾವರಣ ಸೃಷ್ಟಿಯಾಗುತ್ತಾ ಇದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಮತ್ತಷ್ಟು ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಪಕ್ಷದ ಹೈಕಮಾಂಡ್ ಕಾರ್ಯಕರ್ತರನ್ನು ಗಮನಿಸುತ್ತಿಲ್ಲ ಅವರ ಬಗ್ಗೆ ಚಿಂತಿಸುತ್ತಾ ಇಲ್ಲ ಹೊರಗಿನಿಂದ ಬಂದ ನಾಯಕರುಗಳಿಗೆ ಮಾನ್ಯತೆ ನೀಡುತ್ತಿದ್ದಾರೆ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಇದ್ದೇ ಇದೆ.

ಬೆಳಗಾವಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ಈ ಸಮಾವೇಶಕ್ಕೆ ಬಾರದೇ ಇರುವುದು ಕಾರ್ಯಕರ್ತರಲ್ಲಿ ಗುಸು-ಗುಸು ಪ್ರಾರಂಭವಾಗಿತ್ತು.
ಈ ಎಲ್ಲಾ ಬೆಳವಣಿಗೆಗಳಿಂದ ಪಕ್ಷ 20204 ರ ಚುನಾವಣೆಯನ್ನು ಎದುರಿಸಬೇಕಾಗಿದೆ ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ರಾಜ್ಯ ಸರ್ಕಾರದ ಸಾಧನೆಗಳು ಜನರ ಹತ್ತಿರ ತೆಗೆದುಕೊಂಡು ಹೋಗಬೇಕಾಗಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಗುರುತಿಸಲ್ಪಟ್ಟಿರುವ ಪಕ್ಷ ಈ ಬಿಕ್ಕಟ್ಟವನ್ನು ಯಾವ ರೀತಿ ನಿಭಾಯಿಸುತ್ತದೆ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷ ಅಭಯ ನೀಡಲಿದೆಯೇ….?
ರತ್ನಾಕರ್ ಗೌಂಡಿ, ಬೆಳಗಾವಿ