spot_img
spot_img
spot_img
34.1 C
Belagavi
Monday, May 29, 2023
spot_img

ಛಲವಾದಿ ಸಮಾಜದಿಂದ ಯಾರೇ ಬಿ ಫಾರಂ ಪಡೆದರು ಆರ್ಥಿಕ ಸಹಾಯ : ಪ್ರಸಾದ್ ಅಬ್ಬಯ್ಯ 

ವರದಿ : ರತ್ನಾಕರ ಗೌಂಡಿ

ಬೆಳಗಾವಿ : ನಗರದಲ್ಲಿಂದು ಬೆಳಗಾವಿ ಜಿಲ್ಲಾ ಛಲವಾದಿ ಸಮಾಜದ ಸಮಾವೇಶ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಮಾಜಿ ಸಚಿವ ಎಚ್ .ಸಿ. ಮಹದೇವಪ್ಪ ಅವರು ಮಾತನಾಡುತ್ತಾ ಸಂವಿಧಾನದ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನಿಸಿಲರಾಗಬೇಕಾಗಿದೆ. ಸಮುದಾಯ ಸಂಘಟಿತರಾದರೆ ಮಾತ್ರ ನಾವು ಸಂವಿಧಾನವನ್ನು ಉಳಿಸಬಲ್ಲೆವು ,ರಾಷ್ಟ್ರೀಯ ಸ್ವಯಂ ಸೇವಾ ಸಂಘ ತನ್ನ ಸಿದ್ದಾಂತವನ್ನು ಹಂತ ಹಂತವಾಗಿ ಈ ದೇಶದಲ್ಲಿ ಜಾರಿ ಮಾಡ್ತಾ ಇದೆ.

ಮೊದಲನೆಯದಾಗಿ ಶಿಕ್ಷಣವನ್ನು ತನ್ನ ಅಜೆಂಡದ ಮೊದಲನೆಯ ಗುರಿಯಾಗಿ ಇಟ್ಟುಕೊಂಡು ಎಲ್ಲರಿಗೂ ಉಚಿತ ಶಿಕ್ಷಣ ಸಿಗಬಾರದೆಂದು ಪ್ರಯತ್ನಿಸಿಲ್ಲರಾಗಿದೆ. ಮೇಲನೋಟಕ್ಕೆ ಸಂವಿಧಾನ ಸಮರ್ಥವಾಗಿದೆ ಎಂದರು. ಈಗಿರುವ ಸರ್ಕಾರ ಅದನ್ನು ದುರ್ಬಲಗೊಳಿಸುತ್ತಿರುವುದು ಹೈಕೋರ್ಟಿನ ನ್ಯಾಯಾಧೀಶರುಗಳು ಕೂಡ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಮುದಾಯಗಳು ಸಂಘಟಿತರಾಗಬೇಕಾಗಿದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಹುಬ್ಬಳ್ಳಿ – ಧಾರವಾಡ ಮತಕ್ಷೇತ್ರದ ಶಾಸಕರಾದ ಪ್ರಸಾದ್ ಅಬ್ಬಯ್ಯ ಮಾತನಾಡಿ, ಬರುವ 2023ರ ಚುನಾವಣೆಯಲ್ಲಿ ಛಲವಾದಿ ಸಮಾಜದಿಂದ 17 ರಿಂದ 20 ಶಾಸಕರುಗಳನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸುವ ಪ್ರಯತ್ನ ಮಾಡಲಾಗುವುದು.

ಪ್ರತಿಯೊಂದು ಜಿಲ್ಲೆ ಕ್ಷೇತ್ರಗಳಲ್ಲಿ ಮನೆ ಮನೆಗಳಿಗೆ ಹೋಗಿ ಈ ಸಮುದಾಯವನ್ನು ಸಂಘಟಿಸುತ್ತೇವೆ. ಅಲ್ಲದೇ ಚಲವಾದಿ ಸಮಾಜ ಸಮುದಾಯದಿಂದ ಯಾರೇಲ್ಲ ಯಾವುದೇ ರಾಷ್ಟ್ರೀಯ ಪಕ್ಷಗಳಿಂದ ಬಿ ಫಾರಂ ತೆಗೆದುಕೊಂಡು ಬಂದರೆ. ಅವರಿಗೆ ಆರ್ಥಿಕವಾಗಿ ಸಹಾಯ ನೀಡಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು.

ಅಂಬೇಡ್ಕರ್ ಪೀಪಲ್ ಪಾರ್ಟಿ ಯುವ ಘಟಕದ ಅಧ್ಯಕ್ಷರಾದ ಕೃಷ್ಣ ಸಿ. ಎಂ. ಅವರು ಮಾತನಾಡಿ, ಲಂಬಾಣಿ , ಭುವಿ, ವಡ್ಡರ್, ಜಾತಿಗಳನ್ನು ಪ್ರಶಿಷ್ಟ ಪಂಗಡದಲ್ಲಿ ಸೇರಿಸಿರುವ ಕುರಿತು ವಿರೋಧಿಸಿ ಭಾರತದ ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರತ ಸರ್ಕಾರಗಳಿಗೆ ಆದೇಶ ನೀಡಿದರು ಕೂಡ ಈ ಜಾತಿಗಳನ್ನು ಪ್ರಶಿಷ್ಟ ಪಂಗಡದಿಂದ ಕೈ ಬಿಡಲಾಗುತ್ತಿಲ್ಲ. ಆದರೂ ಕೂಡ ಯಾವುದೇ ರಾಷ್ಟ್ರೀಯ ಪಕ್ಷಗಳು ಮತ್ತು ಸ್ಥಳೀಯ ಪಕ್ಷಗಳು ಇದರ ಕುರಿತು ವಿರೋಧ ವ್ಯಕ್ತಪಡಿಸುತ್ತಾ ಇಲ್ಲ ಎಂದು ತಮ್ಮ ಆಸಮಾಧಾನ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಸಾನಿಧ್ಯ ವೈಸಿರುವಂತ ಶ್ರೀ ನಾಗದೇವಿ ಛಲವಾದಿ ಸ್ವಾಮೀಜಿಗಳು ಮಾತನಾಡಿ, ಸಮುದಾಯ ಸಂಘಟಿತರಾಗಬೇಕು ರಾಜಕೀಯ ಇಚ್ಛಾ ಶಕ್ತಿ ಈ ಸಮುದಾಯದಲ್ಲಿ ಪ್ರಬಲವಾಗಬೇಕೆಂದು ಆಶೀರ್ವಚನ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಮಲ್ಲೇಶ್ ಚೌಗುಲೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಛಲವಾದಿ ಮಹಾ ಸಮಾವೇಶ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ.

ನಮ್ಮ ಸಮುದಾಯದ ಧನಿ ವಿಧಾನಸಭೆಯಲ್ಲಿ ಪ್ರತಿದ್ವಿಣಿಸಬೇಕಾಗಿದೆ. ಸರಕಾರಿ ಯೋಜನೆಗಳಿಂದ ವಿದ್ಯಾರ್ಥಿಗಳ ಶಿಷ್ಯವೇತನ ಹಲವಾರು ವಿಷಯಗಳ ಕುರಿತು ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದು ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ನಾಗದೇವಿ ಛಲವಾದಿ ಸ್ವಾಮೀಜಿ ಛಲವಾದಿ, ಮಹಾ ಸಂಸ್ಥಾನ ಚಿತ್ರದುರ್ಗ ಅವರ ಸಾನಿಧ್ಯ ವಹಿಸಿದ್ದರು. ಧಾರವಾಡ – ಹುಬ್ಬಳ್ಳಿ ಮತ ಕ್ಷೇತ್ರದ ಶಾಸಕರಾದ ಪ್ರಸಾದ್ ಅಬ್ಬಯ್ಯ ಸುಭಾಷ್, ನಾಟೇಕರ್ ಛಲವಾದಿ, ಮಹಾ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳು , ಕಾಂಗ್ರೆಸ್ ಮುಖಂಡರು ಮಹಾವೀರ ಮೋಹತೆ , ಸುರೇಶ್ ತಳವಾರ್ ಸಮುದಾಯದ ಮುಖಂಡರು ಮಹದೇವ ತಳವಾರ್ ಕರವೇ ರಾಜ್ಯ ಸಂಚಾಲಕರು ಅರವಿಂದ ಗಟ್ಟಿ, ಕ .ಟಿ ವಿಶ್ವನಾಥ್ ಬೀದರ್ ಜಿಲ್ಲಾಧ್ಯಕ್ಷರು, ದಲಿತ ಮುಖಂಡ ಪ್ರದೀಪ್ ಕುಮಾರ್ ಮಾಳಗಿ, ಸಮುದಾಯದ ಮುಖಂಡರುಗಳುಮತ್ತು ಮತ್ತು ಸಮುದಾಯದ ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related News

ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ವಂದೇ ಭಾರತ್ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಅಸ್ಸಾಂನ ಗುವಾಹಟಿಗೆ ಹೊರಟಿದೆ. ಈ...

ಮಣಿಪುರದಲ್ಲಿ ಮತ್ತೆ ತಲೆ ಎತ್ತಿದ ಹಿಂಸಾಚಾರ ಪೊಲೀಸ್‌ ಸೇರಿದಂತೆ ಐವರು ಸಾವು

ಇಂಫಾಲ್‌: ಕಳೆದ ಕೆಲವು ದಿನಗಳಿಂದ ಸಹಜ ಸ್ಥಿತಿಗೆ ಮರಳುತ್ತಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಭಾನುವಾರ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್‌ ಸೇರಿದಂತೆ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಕಳೆದ ಒಂದು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -