ಮಾರ್ಕಂಡಯ್ಯ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆ ಫಲಿತಾಂಶದ ನಂತರ ಅವಿನಾಶ್ ರಾಮ್ ಬಾವು ಪೋತದಾರ್ ಪ್ಯಾನಲಿನ ರೈತರ ತೀರ್ಪುವನ್ನು ನಾವು ತಲೆಬಾಗಿ ಸ್ವೀಕರಿಸುತ್ತೇವೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಅರುಣ್ ಕಟಾಬಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಇದೇ ಸಂದರ್ಭದಲ್ಲಿ ಸೋಲಿನ ಕಾರಣಗಳ ಕುರಿತು ಮಾಧ್ಯಮದ ಜೊತೆ ಚರ್ಚೆ ಮಾಡುತ್ತಾ ಈ ಸೋಲಿಗೆ ಅನೇಕ ಕಾರಣಗಳಿರಬಹುದು ಅದನ್ನು ನಾವು ಪರಿಶೀಲನೆ ಮಾಡುತ್ತೇವೆ ,ಆದರೆ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗಾಗಿ ಈ ಎರಡು ಘಟಕಗಳು ಕೂಡಿ ಕಾರ್ಯ ನಿರ್ವಹಿಸಬೇಕಾಗಿದೆ. ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ,
ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶಣ್ಣ ಜಾರಕಿಹೊಳಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾರ್ಗದಲ್ಲಿ ದರ್ಶನದಲ್ಲಿ ಸಕ್ಕರೆ ಕಾರ್ಖಾನೆ ಮತ್ತಷ್ಟು ಉನ್ನತ ಸ್ಥಾನಕ್ಕೆ ಹೋಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅವಿನಾಶ್ ಪೋತದಾರ್ ಪ್ಯಾನೆಲಿನ ಸೋಲಿನ ಕುರಿತು ಪ್ರಸ್ತಾಪಿಸಿ ಸೋಲಿಗೆ ಕಾರಣಗಳು ಅನೇಕ ಇರಬಹುದು, ಸಕ್ಕರೆ ಕಾರ್ಖಾನೆ ಲೀಸ್ ನೀಡುವುದು ಕುರಿತು ಅವಿನಾಶ್ ಪೋತ್ತದಾರ ಅವರು ಒಂದು ಹೇಳಿಕೆ ನೀಡಿದರಿಂದಾಗಿ ರೈತರಲ್ಲಿ ಆತಂಕ ಸೃಷ್ಟಿವಾಗಿತ್ತು.
ಅದು ಒಂದು ಕಾರಣವಾಗಿರಬಹುದು ಮತ್ತು ಸಕ್ಕರೆ ಕಾರ್ಖಾನೆಗೆ ಹೆಚ್ಚಿನ ಬಂಡವಾಳ ಅವಶ್ಯಕತೆ ಇದೆ ಅರಣ್ಯ ಇಲಾಖೆಯಿಂದ 30 ವರ್ಷಗಳ ವರೆಗೆ ಜಮೀನುವನ್ನು ಲೀಸ್ ಪಡೆದಿದ್ದು ಅದನ್ನು ಖರೀದಿ ಮಾಡಬೇಕಾಗುವ ಪ್ರಸ್ತಾವನೆ ಆಡಳಿತ ಮಂಡಳಿ ಮುಂದು ಇದೆ ಅದರ ಕಡೆ ಹೆಚ್ಚಿನ ಗಮನ ಕೊಡಬೇಕಾಗಿದೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕಾರ್ಖಾನೆಗೆ ಬರಬೇಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅವಿನಾಶ್ ಪೋತದಾರ್ ಅವರ ಮಾರ್ಗದರ್ಶನ ಆಡಳಿತ ಮಂಡಳಿ ಪಡೆದುಕೊಳ್ಳಬೇಕೆಂದು ಅವರಲ್ಲಿ ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಉಪ ಅಧ್ಯಕ್ಷ ಅರುಣ್ ಕಟಾಬಳೆ ಹೇಳಿದರು