spot_img
spot_img
spot_img
28.1 C
Belagavi
Thursday, September 29, 2022
spot_img

ಕಲೆ ಸಂಸ್ಕೃತಿ ಬೆಳೆಸುವುದು ನಮ್ಮೆಲ್ಲರ ಹೊಣೆ

spot_img

ವರದಿ : ಸಾದುರೆ ಶಿವಕುಮಾರ

ಔರಾದ : ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾಗಿರುವ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಅವುಗಳನ್ನು ಉಳಿಸಿ-ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಆಧುನಿಕ ಅಬ್ಬರದ ನಡುವೆ ಜನಪದ ಕಲೆಗಳು ಕಣ್ಮರೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾಗಿದೆ ಎಂದು ಸಿದ್ರಾಮ ಕನೇರಿ ತಿಳಿಸಿದರು.

ತಾಲ್ಲೂಕಿನ ಚಿಕ್ಲಿ(ಜೆ) ಗ್ರಾಮದ ಸರ್ಕಾರಿ ಶಾಲಾ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಶ್ರೀ ಭವಾನಿ ಮಲ್ಟಿ ಪರ್ಪೊಸ್ ಸೊಸೈಟಿ ಬೀದರ ಇವರ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಜಾನಪದ ಗಡಿನಾಡು ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸತತ ಪ್ರಯತ್ನಯಿಂದ ಗಡಿನಾಡು ಜಾನಪದಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬೀದರ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೂಡ ಉತ್ತೇಜನ ನೀಡಿದ್ದೆ ಅದುದರಿಂದ ಗಡಿನಾಡು ಪ್ರದೇಶದಲಿರುವ ಹಂತ್ತಿ ಪದ, ಸೋಭಾನ ಪದ, ಸುಗ್ಗಿ ಹಾಡು, ಕುಟ್ಟು ಬೀಸುವ ಈ ಎಲ್ಲ ಕಲೆಗಳನ್ನು ಉಳಿಸಿಕೊಂಡು ಬೇಳೆಸಿಕೊಂಡು ಹೋಗಿದ್ದರೆ ಮಾತ್ರ ಮುಂದಿನ ಪಿಣಿಗಿಗೆ ಅನುನೂಕೂಲವಾಗುವುದು ಇಲ್ಲವಾದಲ್ಲಿ ಇಂತಹ ಕಲೆಗಳು ಮುಳುಗಿ ಹೋಗದಂತೆ ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.

ಚಿಕ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಮಲ್ಗೋಂಡಾ ಅವರು ಮಾತಾನಾಡುತ ಗಡಿಭಾಗದಲ್ಲಿ ಭಾಷೆಯು ಬೇರೆ ಬೇರೆಯಾಗಿದ್ದರೂ ಜನರ ಭಾವನೆಗಳಿಗೆ ಸ್ವಂಧಿಸುವುದೇ ಜನಪ ಸಂಸ್ಕೃತಿಯು ಮೂಲ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಸಂಜು ಜೈರಾಮ, ಗ್ರಾಮ ಪಂಚಾಯಿತಿ ಸದಸ್ಯರಾದ ಹಣಮಂತ ಶಿಂಧೆ, ಭಾನುದಾಸ ರೆಡ್ಡಿ, ರಾಮಪ್ಪ ಹುಸೇನ್ರೆ, ಕಮಲಮ್ಮ ಅರ್ಜುನ, ಸದಸ್ಯರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

spot_img

Related News

ಗಂಟುರೋಗದಿಂದ ದನಗಳು ಮೃತಪಟ್ಟರೆ 20 ಸಾವಿರ ರೂ.ಗಳ ಪರಿಹಾರ : ಸಿಎಂ ಬೊಮ್ಮಾಯಿ 

ಹಾವೇರಿ : ಗಂಟುರೋಗದಿಂದ ದನಗಳು ಮೃತಪಟ್ಟರೆ 20 ಸಾವಿರ ರೂಪಾಯಿಗಳ ಪರಿಹಾರ ಒದಗಿಸಲಾಗುವುದು ಹಾಗೂ ಗಂಟು ರೋಗದ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು ಹಾವೇರಿಯ ಗುರುಭವನದಲ್ಲಿ ಹಾವೇರಿ...

ಮೋದಿ ಅವರ ನೇತೃತ್ವದಲ್ಲಿ 150 ಸ್ಥಾನಗಳ ಗೆಲುವ ಪಣ : ಯಡಿಯೂರಪ್ಪ 

ಶಿವಮೊಗ್ಗ: ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣ ಹೊಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -