ಬೆಳಗಾವಿ: ದಿ ಮಾರ್ಕಂಡೇಯ ಕೋ ಆಪರೇಟಿವ್ಹ ಶುಗರ್ ಮೀಲ್ ಲಿ. ಕಾಕತಿ ಬೆಳಗಾವಿ ಆಡಳಿತ ಮಂಡಳಿ ಚುನಾವಣೆ ಇಂದು ಮತದಾನದ ಪ್ರಕ್ರಿಯೆ ಪ್ರಾರಂಭವಾಯಿತು.
ಬೆಳಗ್ಗೆಯಿಂದಲೇ ಮತದಾರರು ಆಡಳಿತ ಮಂಡಳಿಗೆ ಚುನಾವಣೆ ಮತದಾನ ಪ್ರಾರಂಭಿಸಿದ್ದಾರೆ. ಸಾಯಂಕಾಲ 4 ರವರಗೆ ಮತದಾನ ನಡೆಯಲಿದ್ದು 4:30 ಕ್ಕ ಮತ ಎಣಿಕೆ ಪ್ರಾರಂಭವಾಗಲಿದೆ.
ಸಕ್ಕರೆ ಕಾರ್ಖಾನೆ ಚುನಾವಣೆಯ ಒಟ್ಟು 15 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ ಅದರಲ್ಲಿ ಸಾಮಾನ್ಯ 7, ಪರಿಶಿಷ್ಟ ಜಾತಿ 1, ಪ್ರಶಿಷ್ಟ ಪಂಗಡ 1, ಹಿಂದುಳಿದ ಪ್ರವರ್ಗ ” ಎ” ಹಿಂದುಳಿದ ಪ್ರವರ್ಗ “ಬಿ”1, ಮಹಿಳಾ 2, ಸಹಕಾರ ಸಂಘ ಬಿ ವರ್ಗ 1 ಕಬ್ಬು ಬೆಳೆಗಾರರಲ್ಲದ ಸದಸ್ಯರು ಡಿ ವರ್ಗ 1 ಸೇರಿದಂತೆ ಒಟ್ಟು 15 ಸ್ಥಾನಗಳಿವೆ.
ಸದಸ್ಯರು ಅದರಂತೆ ಆಡಳಿತ ಮಂಡಳಿಯ ಸದಸ್ಯರುಗಳು ತೆರೆಯ ಮರೆಯಲ್ಲಿ ಅವಿರೋಧವಾಗಿ ಸದಸ್ಯರಗಳನ್ನು ಆರಿಸಲು ಪ್ರಯತ್ನ ನಡೆಯುತ್ತಿತ್ತು. ಆದರೆ ರಾಜಕೀಯ ಸನ್ನಿವೇಶಗಳಿಂದಾಗಿ ಅವಿರೋಧ ಆಗುವ ಸಂಧಾನ ವಿಫಲವಾಯಿತು.
ಮಾರ್ಕಂಡೇಯ ಕೋ-ಆಪರೇಟಿವ್ಹ ಶುಗರ್ ಮೀಲ್ ಲಿ., ಕಾಕತಿ ಬೆಳಗಾವಿ ಆಡಳಿತ ಮಂಡಳಿಗಾಗಿ ಒಟ್ಟು 55 ನಮಂಕನ ಭರ್ತಿಯಾಗಿದ್ದುವು. ಅದರಲ್ಲಿ 16 ತಮ್ಮ ಉಮಿತಿಗಾರಿಕೆಯಿಂದ ಹಿಂಪಡೆದಿದ್ದು ಉಳಿದ 39 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಒಟ್ಟು 3936 ಮತದಾರರಿದ್ದು ಆಡಳಿತ ಮಂಡಳಿಯ ಎರಡು ಬನಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸಿದ್ದಾರೆ. ಅದರಲ್ಲಿ ಯಾರಿಗೆ ವಿಜಯಮಾಲೆ ಕೊರಳಿಗೆ ಬೀಳಲಿದೆ ಎನ್ನುವುದು ರವಿವಾರ ರಾತ್ರಿ ಏಳು ಗಂಟೆಯಿಂದ ಎಂಟು ಗಂಟೆವರೆಗೆ ಫಲಿತಾಂಶ ಹೊರಗೆ ಬೀಳುವ ನಿರೀಕ್ಷೆ ಇದೆ.