ಬೆಳಗಾವಿ : ಸವದತ್ತಿ ಯಲ್ಲಮ್ಮ ವಿಧಾನಸಭಾ ಮತ ಕ್ಷೇತ್ರದ ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ವಿಶ್ವಾಸ್ ವೈದ್ಯ ತಮ್ಮ ಕಚೇರಿಯಲ್ಲಿ ಕ್ಷೇತ್ರದ ಬಡಕುಟುಂಬದ ಸಹೋದರಿಯರ ಮದುವೆಗೆ ಟ್ರೇಜುರಿ ಕಾಟ್ ಹಾಗೂ ಬಾಂಡೆ ಸಾಮಗ್ರಿ ಉಡುಗೊರೆ ನೀಡಿದರು.
ಸವದತ್ತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸವದತ್ತಿ ಪಟ್ಟಣದ ಪ್ರಭುನವರ ಓಣಿ, ಒಕ್ಕಲತನ ಓಣಿ, ಯರಗಟ್ಟಿ, ಬುದಿಗೊಪ್ಪ, ರೈನಾಪುರ, ಮುನವಳ್ಳಿ, ಸವದತ್ತಿ ಅರಳಿಗಿಡದ ಓಣಿ, ಬೇಡಸುರ, ಮಬನೂರ, ಕೋಟೂರ್, ಮೋಕಾಶಿ ಓಣಿ ಸವದತ್ತಿ, ಮದ್ಲುರ ಗ್ರಾಮದಲ್ಲಿನ ಬಡ ಕುಟುಂಬದ ಸಹೋದರಿಯ ಮದುವೆಗೆ ಟ್ರೇಜುರಿ ಕಾಟ್ ಹಾಗೂ ಬಾಂಡೆ ಸಾಮಗ್ರಿಗಳನ್ನು ಉಡುಗೊರೆ ನೀಡಲಾಯಿತು. ಜೊತೆಗೆ 5 ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.