ಕಾಕತಿ ಗ್ರಾಮ ಪಂಚಾಯತ್ ಎರಡನೆಯ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಜರುಗಿತು. ಅಧ್ಯಕ್ಷರ ಸ್ಥಾನಕ್ಕೆ ಮಹಿಳಾ ಸಾಮಾನ್ಯ ವರ್ಗ ಮೀಸಲಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳಾ ಸಾಮಾನ್ಯ ವರ್ಗ ಮೀಸಲಾಗಿತ್ತು.
ಎರಡು ಸ್ಥಾನಗಳು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿರುವುದ ರಿಂದ ಹಚ್ಚಿನ ಪೈಪೋಟಿ ನಿರೀಕ್ಷೆಯಲ್ಲಿತ್ತು, ಆದರೆ ಸಚಿವ ಸತೀಶ್ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಈ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿ ಮಾಡಲಾಯಿತು.
ಕಾಕತಿ ಗ್ರಾಮ ಪಂಚಾಯತ್ 37 ಸದಸ್ಯರ ಹೊಂದಿರುವ ಗ್ರಾಮ ಪಂಚಾಯತ್ ಹೆಚ್ಚಿನ ಸಂಖ್ಯಾಬಲ ಕಾಂಗ್ರೆಸ್ ಪಕ್ಷ ಬೆಂಬಲಿತ ಸದಸ್ಯರಿದ್ದಾರೆ. ಚುನಾವಣೆ ಸಂದರ್ಭದಲ್ಲಿ 37 ಸದಸ್ಯರ ಬಗ್ಗೆ 31 ಸದಸ್ಯರು ಹಾಜರಿದ್ದರು ,
ಅಧ್ಯಕ್ಷರಾಗಿ ವರ್ಷಾ ಲಕ್ಷ್ಮಣ್ ಮುಚ್ಚಂಡಿಕರ್, ಹಾಗೂ ಉಪಾಧ್ಯಕ್ಷರಾಗಿ ರೇಣುಕಾ ಜ್ಯೋತಿಬಾ ಕೋಳಿ ಇವರು ಅವಿರೋಧವಾಗಿ ಆಯ್ಕೆಯಾದರು.
ಮೊದಲನೆಯ ಅವಧಿಯ ಅಧ್ಯಕ್ಷರಾದ ಸುನಿಲ್ ಸುನಗಾರ್ ಅವರು ಮಾತನಾಡಿ ಕಾಕತಿ ಗ್ರಾಮ ಪಂಚಾಯತ್ ಒಂದು ಆದರ್ಶ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ನಾವು ಪ್ರಯತ್ನಿಶೀಲರಾಗಿರೋಣ ಎಂದು ನೂತನ ಅಧ್ಯಕ್ಷರಿಗೆ ಭರವಸೆ ನೀಡಿದರು. ನೂತನ ಅಧ್ಯಕ್ಷ ಉಪಾಧ್ಯಕ್ಷರ ಬೆಂಬಲಿಸಿದೆ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳು ಹೇಳಿ ಕಾಕತಿ ಗ್ರಾಮ ಪಂಚಾಯತವನ್ನು ಅಭಿವೃದ್ಧಿ ಹಾಗೂ ಮಾದರಿಯ ಗ್ರಾಮ ಪಂಚಾಯತಿಯನ್ನಾಗಿ ಮಾಡೋಣ ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ತಂಭುಲಿಂಗಪ್ಪ ಹಾಗೂ ಅಭಿವೃದ್ಧಿ ಅಧಿಕಾರಿ ಅರುಣ್ ಲಕ್ಷ್ಮಣ್ ನಾಥ್ ಭುವಾ ಉಪಸ್ಥಿತರಿದ್ದರು.