spot_img
spot_img
spot_img
28.1 C
Belagavi
Tuesday, October 4, 2022
spot_img

ರಾಯಭಾಗ: ಶೀಲ ಶಂಕಿಸಿ ಹೆಂಡತಿ ಕೊಲೆ : ಇಬ್ಬರು ಕಂದಮ್ಮಗಳು ಅನಾಥ

spot_img

ಚಿಕ್ಕೋಡಿ: ಹೆಂಡತಿಯ ಶೀಲ ಶಂಕಿಸಿ ಕುತ್ತಿಗೆ ಸೀರೆಯಿಂದ ಬಿಗಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿಯಲ್ಲಿ ನಡೆದಿದೆ. ಆಶಾ ಕೊಲೆಯಾದ ದುರ್ದೈವಿ. ಇಂದರಿಂದ ಬ್ಬರು ಮಕ್ಕಳು ಆನಾಥವಾಗಿವೆ. ದಿನಪೂರ್ತಿ ಕುಡಿದು ಗಲಾಟೆ ಮಾಡುತ್ತಿದ್ದ ಇತನ ಹಿಂಸೆ ತಾಳದೇ ಬೇರೆಯಾಗಿ ವಾಸವಾಗಿದ್ದರು.

ಒಂದುವರ್ಷದ ಹಿಂದೆ ಪತ್ನಿಯ ಮನವೊಲಿಸಿ ಆರೋಪಿ ಪ್ರದೀಪ್‌ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಪ್ರದೀಪ್‌ಗೆ ಹಣದ ಅವಶ್ಯಕತೆ ಇದ್ದುದರಿಂದ ತನ್ನ ಪತ್ನಿಯನ್ನೂ ಕೆಲಸಕ್ಕೆ ಕಳುಹಿಸಿದ.ಪತ್ನಿ ಕೆಲಸಕ್ಕೆ ಹೋಗುತ್ತಿದ್ದುದರಿಂದ ಆಶಾ ಮೇಲೆ ಅನುಮಾನ ಶುರುವಾಗಿದೆ. ಇದೇ ವಿಷಯಕ್ಕೆ ದಂಪತಿ ನಡುವೆ ಜಗಳವಾಡುತ್ತಿತ್ತು.

ನಿನ್ನೆ ಕುಡಿದು ಬಂದ ಆರೋಪಿ ಪ್ರದೀಪ್‌ ಪತ್ನಿಯ ಸೀರೆಯಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ನಂತರ ಬೆಳಗ್ಗೆ ಎದ್ದಾಗ ಪತ್ನಿ ಮೃತಪಟ್ಟಿರುವುದು ತಿಳಿದಿದೆ. ತನ್ನ ಮೇಲೆ ಅನುಮಾನ ಬರಬಾರದು ಎಂದು ಮನೆ ಬಿಟ್ಟು ಹೋಗಿದ್ದಾನೆ.

ನಂತರ ಸ್ವಲ್ಪ ಗಂಟೆಯ ಬಳಿಕ ಮನೆಗೆ ಬಂದು ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬೊಬ್ಬೆ ಹೊಡೆದಿದ್ದಾನೆ. ‍ಪೊಲೀಸರು ತನಿಖೆ ಕೈಗೊಂಡಾಗ ಪ್ರದೀಪನ ಮುಖದ ಮೇಲೆ ಗಾಯದ ಗುರುತುಗಳು ಕಂಡಿವೆ. ಸಂದೇಹ ಬಂದು ವಿಚಾರಿಸಿದಾಗ ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಈತ. ಸದ್ಯ ಈತನನ್ನು ರಾಯಭಾಗ ಪೊಲೀಸರು ಬಂಧಿಸಿದ್ದಾರೆ.

spot_img

Related News

ಮುಜರಾಯಿ ಇಲಾಖೆಯ ಅನುದಾನವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ : ರಾಜು ಕಾಗೆ

ಬೆಳಗಾವಿ: ಮುಜರಾಯಿ ಇಲಾಖೆಯ ಅನುದಾನವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ‌ ಜೊಲ್ಲೆ ವಿರುದ್ಧ ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಐನಾಪೂರ ಪಟ್ಟಣದಲ್ಲಿ ಮಾತನಾಡಿರುವ...

ದುರ್ಗೆ ವೇಷ ಧರಿಸಿ ಹದಗೆಟ್ಟ ವಿರುದ್ಧ ಪ್ರತಿಭಟಿಸಿದ ಬಾಲಕಿ 

ಹುಬ್ಬಳ್ಳಿ : ದುರ್ಗೆಯ ವೇಷ ಧರಿಸಿ ಬಾಲಕಿಯೊಬ್ಬಳು ವೇಷ ಧರಿಸಿ ಹುಬ್ಬಳ್ಳಿಯಲ್ಲಿ ನೀರಿನ ಕೊಚ್ಚೆ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಡೆದಿದ್ದಾಳೆ. ಈ ವಿಡಿಯೋ ಮೂಲಕ ರಸ್ತೆಗಳ ದುರವಸ್ಥೆಯ ಬಗ್ಗೆ ಗಮನ ಸೆಳೆಯುವ ಪ್ರಯತ್ನದಲ್ಲಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -