
ಬಳ್ಳಾರಿ : ಹುಚ್ಚುನಾಯಿ ಕಡಿತದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನಡೆದಿದೆ.
3 ವರ್ಷದ ಸುರಕ್ಷಿತಾ ಹಾಗೂ 7 ವರ್ಷದ ಶಾಂತಕುಮಾರ್ ಮೃತಪಟ್ಟಿದ್ದಾರೆ. ಮಕ್ಕಳು ಆಟವಾಡುತ್ತಿದ್ದಾಗ ದಾಳಿ ಮಾಡಿದ್ದ ಹುಚ್ಚುನಾಯಿ, ಸುರಕ್ಷಿತಾಳ ಮುಖಕ್ಕೆ ಹಾಗೂ ಶಾಂತಕುಮಾರ್ ಕೈಗೆ ಕಚ್ಚಿತ್ತು.
ಇದರಿಂದ ತೀವ್ರ ಗಾಯಗೊಂಡಿದ್ದ ಸುರಕ್ಷಿತಾ ನವೆಂಬರ್ 21ರಂದು ಮೃತಪಟ್ಟಿದ್ದಳು. ಶಾಂತಕುಮಾರ್ ನವಂಬರ್ 22ರಂದು ಮೃತಪಟ್ಟಿದ್ದಾನೆ.