ನಾಡಿನ ಅರಣ್ಯ ಮತ್ತು ವನ್ಯಜೀವಿಗಳ ಸಂಪತ್ತನ್ನು ಸಂರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಹುತಾತ್ಮರಾದ ಅರಣ್ಯ ಸಿಬ್ಬಂದಿಗಳಿಗೆ ಇಂದು ಅರಣ್ಯ ಇಲಾಖೆ ಗೌರವ ನಮನಗಳನ್ನು ಸಲ್ಲಿಸಿತು.ಬೆಳಗಾವಿ ವೃತ್ತದ ಅರಣ್ಯ ಇಲಾಖೆ ಸಂಕೀರ್ಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ಪರೇಡ್ ಗೌರವ ವಂದನೆ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳು ಹಾಗೂ ಮುಖ್ಯ ಸಂರಕ್ಷಣಾಧಿಕಾರಿಗಳು ಅತಿಥಿಗಳು ಇಲಾಖೆಯ ಅಧಿಕಾರಿ ವರ್ಗ, ವಿವಿಧ ಸಂಘದ ಪದಾಧಿಕಾರಿಗಳು, ಅರಣ್ಯ ಹುತಾತ್ಮರವರಿಗೆ ಹೂ ಗುಚ್ಚ ಅರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್ ಅವರು ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡುತ್ತಾ ಅರಣ್ಯ ಸಿಬ್ಬಂದಿ ಕೆಲಸ ಸುಲಭದ ಕೆಲಸವಲ್ಲ ತಮ್ಮ ಜೀವದ ಹಂಗಿಲ್ಲದೆ ಕಾರ್ಯನಿರ್ವಹಿಸುತ್ತಿರುತ್ತಾರೆ. ಹಾಸನದಲ್ಲಿ ಆನೆಯ ದಾಳಿಗೆ ಅರಣ್ಯ ಸಿಬ್ಬಂದಿ ಹುತಾತ್ಮರನ್ನು ಸ್ಮರಣೆ ಮಾಡಿದರು. ಅತಿಥಿಯಾಗಿ ಪ್ರಧಾನಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ದೇವಿ, ಮಂಜುನಾಥ್ ಚವ್ಹಾಣ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ, ಪೊಲೀಸ್ ಆಯುಕ್ತರಾದ ಸಿದ್ದರಾಮಪ್ಪ,
ಕಮಾಂಡರ್ ಪಿ ಸಿ .ವಿಂಗ್ ಬ್ರಿಗೇಡ್ ಸಿ. ದಯಾಲನ್, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಭೀಮಶಂಕರ್ ಗುಳೇದ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಹರೀಶ್ ಬೋಯರ್ ಹಾಗೂ ಉಪಾರಣ್ಯ ಸಂರಕ್ಷಣೆ ಅಧಿಕಾರಿಗಳಾದ ಶಂಕರ್ ಕಲ್ಲೋಳ್ಕರ್, ಹಾಗೂ ಸಹಾಯಕ ಸಂರಕ್ಷಣಾಧಿಕಾರಿಗಳಾದ ಶಿವರುದ್ರಪ್ಪ ಕಬಾಡಿ, ಹಾಗೂ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು