38 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಆರ್ ಬಿ ಅಕಿವಾಡ 1985 ರಲ್ಲಿ ತನ್ನ ಶಿಕ್ಷಣ ವೃತ್ತಿಯನ್ನು ಕೆಪಿಎಸ್ ಮಂಗಾವತಿ ಪ್ರೌಢಶಾಲೆಯಲ್ಲಿ ಪ್ರಾರಂಭಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ವಿದ್ಯಾರ್ಥಿಗಳು ಮತ್ತು ತಮ್ಮ ಸಹವರ್ತಿಗಳ ಅಚ್ಚುಮೆಚ್ಚಿನ ಶಿಕ್ಷಕರು ಹಾಗೂ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ಶಿಕ್ಷಕರಾಗಿ ಐನಾಪುರ್, ಹೂಗಾರ್, ದತ್ವಾಡ, ಮತ್ತು ಬಿ ಒ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಕೆಬಿಎಸ್ ಮುಂಗುಸೋಳಿ ಶಾಲೆಯ ಪ್ರಧಾನ ಗುರುಗಳಾಗಿ 17 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.
ಮಂಗಸುಳಿ ಗ್ರಾಮ ಪಂಚಾಯತ್ ಸೇವಾ ನಿವೃತ್ತ ನಿಮಿತ್ತವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನ ಅರ್ಪಣೆಯನ್ನು ಡಿಕೆ ಕಾಂಬಳೆ ಅವರು ನೆರವೇರಿಸಿದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಳು ಭಜಂತ್ರಿ ಉಪಾಧ್ಯಕ್ಷರಾದ ಸವಿತಾ ಪಾಟೀಲ್, ಎಸ.ಡಿ.ಎಂ.ಸಿ ಅಧ್ಯಕ್ಷರಾದ ದಿಲೀಪ್ ಮಗದುಮ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ವಸಂತ್ ಮಾಳಿ, ಅದುರೇ ಮಾಳಿ , ಪ್ರಮೋದ್ ಪೂಜಾರಿ , ಎಂ ಜೆ ಸಂತುಬಾಳ, ಎಚ್ ಎಮ್ ಭಂಡಾರಿ, ಯು ಟಿ ಕೋತ್ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿಗಾರರು, ಹರಿಶ್ಚಂದ್ರ ಹೊಗ್ಗೆ, ಕಾಗವಾಡ