spot_img
spot_img
spot_img
18.7 C
Belagavi
Monday, September 26, 2022
spot_img

ಎಸಿಪಿ ನಾರಾಯಣ ಬರಮನಿ ಸೇರಿ ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ

spot_img
spot_img

For Breaking News Download App

ಬೆಂಗಳೂರು : ಬೆಳಗಾವಿಯ ಕ್ರೈಂ ವಿಭಾಗದ ಎಸಿಪಿ ನಾರಾಯಣ ಬರಮನಿ, ಬಿ.ಆರ್.ಗಡ್ಡೇಕರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಎಸಿಪಿ ನಾರಾಯಣ ಬರಮನಿ ಅವರನ್ನು ಮಾರ್ಕೆಟ್ ಎಸಿಪಿಯಾಗಿ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಸದಾಶಿವ ಕಟ್ಟಿಮನಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇನ್ನು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದ ಬಿ.ಆರ್.ಗಡ್ಡೇಕರ್ ಅವರನ್ನು ಸಿಇಎನ್ ಪೊಲೀಸ್ ಠಾಣೆಗೆ ವಾಪಸ್ ನೇಮಿಸಲಾಗಿದೆ.

ಉದ್ಯಮಬಾಗ್ ಇನ್ ಸ್ಪೆಕ್ಟರ್ ಧೀರಜ್ ಶಿಂಧೆ ಅವರನ್ನು ಡಿಸಿಇಆರ್ ಗೆ ವರ್ಗಾವಣೆ ಮಾಡಲಾಗಿದೆ. ಶಹಾಪುರ ಠಾಣೆಯಿಂದ ವಿನಾಯಕ ಬಡಿಗೇರ ಅವರನ್ನು ಸಂಚಾರ ದಕ್ಷಿಣ ಠಾಣೆಗೆ ವರ್ಗಾಯಿಸಲಾಗಿದೆ. ಡಿಎಸ್ ಬಿಯಿಂದ ಸುದರ್ಶನ ಪಟ್ಟಣಕುಡೆ ಅವರನ್ನು ಹುಬ್ಬಳ್ಳಿಗೆ ವರ್ಗಾಯಿಸಲಾಗಿದೆ. ಸುನೀಲ್ ಕುಮಾರ ಅವರನ್ನು ಎಸಿಬಿಯಿಂದ ಬೆಳಗಾವಿ ಶಹಾಪುರ ಠಾಣೆಗೆ ವರ್ಗಾಯಿಸಲಾಗಿದೆ.

ರಾಮಣ್ಣ ಬಿರಾದಾರ ಅವರನ್ನು ಐಎಸ್ ಡಿಯಿಂದ ಉದ್ಯಮಬಾಗ್ ಠಾಣೆಗೆ, ಮಂಜುನಾಥ ನಾಯಕ ಅವರನ್ನು ದಕ್ಷಿಣ ಸಂಚಾರ ಠಾಣೆಯಿಂದ ಐಎಸ್ ಡಿಗೆ ವರ್ಗಾವಣೆ ಮಾಡಲಾಗಿದೆ.

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -