ಅಕ್ಟೋಬರ್ 29 ಕನ್ನಡಿಗರಿಗೆ ಭರಿಸಲಾಗದ ನೋವು ಕೊಟ್ಟ ದಿನ. ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದ ದಿನ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ದೂರವಾಗಿ ಎರಡು ವರ್ಷ ಆಗ್ತಿದೆ.
ಎರಡನೇ ವರ್ಷದ ಪುಣ್ಯಸ್ಮರಣೆಗೆ ಅಪ್ಪು ಸ್ಮಾರಕ ರೆಡಿಯಾಗಿದೆ. ಅನ್ನದಾನ, ರಕ್ತದಾನ, ನೇತ್ರದಾನದ ಕ್ಯಾಂಪ್ ಮಾಡುತ್ತಿದ್ದಾರೆ ಅಭಿಮಾನಿಗಳು. ದೂರದ ಊರುಗಳಿಂದ ಅಭಿಮಾನಿ ದೇವರುಗಳು ಅಪ್ಪುನ ನೋಡಲು ಈಗಾಗ್ಲೇ ಹೊರಟಿದ್ದಾರೆ. ಅಪ್ಪು ನಮನ ಮತ್ತು ಪ್ರೀತಿಯ ಧ್ಯಾನ ಮಾಡಲು ಮಧ್ಯರಾತ್ರಿಯಿಂದ ಶುರುವಾಗಿದೆ.
ದೊಡ್ಮನೆ ಸದಸ್ಯರು ಅಪ್ಪು ಸ್ಮಾರಕಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಕುಟುಂಬದವರ ಪೂಜೆ ಬಳಿಕ ಅಭಿಮಾನಿ ದೇವರುಗಳು ಅಪ್ಪುಗೆ ನಮಿಸಲಿದ್ದಾರೆ. ಕೈ ಮುಗಿದು ಸ್ಮರಿಸಲಿದ್ದಾರೆ. ಹಬ್ಬದಂತೆ ಜನ ಆ ಜಾಗದಲ್ಲಿ ಸೇರುತ್ತಾರೆ. ಹೂವು ಹಾಕಿ ಅಲಂಕಾರ ಮಾಡಿ ಕಣ್ಣುತುಂಬಿಕೊಳ್ತಾರೆ. ಅಪ್ಪು ನೀನು ನಮ್ಮನ್ನ ಬಿಟ್ಟು ಹೋಗಿದ್ದು ಮೋಸ ಮೋಸ ಮೋಸ ಅಂತ ಜನ ಇಂದಿಗೂ ಕೊರಗ್ತಾರೆ. ಅಪ್ಪು ಅಮರ ಅವರ ನೆನಪು ಅಜರಾಮರ.