ಬೆಳಗಾವಿ: ಇಂದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪನೆ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ನಾಯಕರುಗಳು ಬೆಳಗಾವಿಗೆ ಆಗಮಿಸಲಿದ್ದಾರೆ.
ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಘಟಾನುಘಟಿ ನಾಯಕರ ದಂಡೇ ಹರಿದು ಬರುತ್ತಿದ್ದು ಬೆಳಗಾವಿ ವಿಭಾಗದಲ್ಲಿ ಬೆಳಗಾವಿ- ಸಂಕೇಶ್ವರ ಬೈಪಾಸ್ ನ 6 ಲೇನಿಂಗ್ (ವೆಚ್ಚ ರೂ.1,479 ಕೋಟಿ, ಉದ್ದ -40ಕಿ.ಮೀ), ಸಂಕೇಶ್ವರ ಬೈಪಾಸ್ – ಮಹಾರಾಷ್ಟ್ರ ಗಡಿವರೆಗೆ 6 ಲೇನಿಂಗ್ (ವೆಚ್ಚ ರೂ.1,389, ಉದ್ದ- 38 ಕಿ.ಮೀ) ಹಾಗೂ ಬೆಳಗಾವಿಯ ಜಾಂಬೋಟಿಯಿಂದ- ಗೋವಾ ಗಡಿವರೆಗಿನ 2 ಲೇನಿಂಗ್ ರಸ್ತೆ (ವೆಚ್ಚ ರೂ.247 ಕೋಟಿ, ಉದ್ದ – 70 ಕಿ.ಮೀ)ಗೆ ಶಂಕುಸ್ಥಾಪನೆ ನೆರವೇರಲಿದೆ.
ನಿತಿನ್ ಗಡ್ಕರಿ ಅವರು ಇಂದು ರಾಜ್ಯದಲ್ಲಿ ಒಟ್ಟು 1,328 ಕಿ.ಮೀ ಉದ್ದದ ರೂ.19.930 ಕೋಟಿ ವೆಚ್ಚದ 46 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ.