ಮಂಗಳೂರು : ಶಿವಮೊಗ್ಗದಲ್ಲಿ ಇಬ್ಬರು ಮಂಗಳೂರಿನಲ್ಲಿ ಒರ್ವ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರು ಶಂಕಿತ ಉಗ್ರರನ್ನು ಒಂಬತ್ತು ದಿನ ಪೊಲೀಸ್ ಕಸ್ಟಡಿಗೆ ನೀಡಿ ಶಿವಮೊಗ್ಗ ಕೋರ್ಟ್ ಆದೇಶ ಹೊರಡಿಸಿದೆ.
ಮಂಗಳೂರಿನಲ್ಲಿ ಅನ್ಸರ್ ಎಂಬ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದು, ಅಜ್ಞಾತ ಸ್ಥಳದಲ್ಲಿಟ್ಟುಕೊಂಡು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗದಲ್ಲಿ ಶಂಕಿತ ಉಗ್ರ ಯಾಸಿನ್ ಹಾಗೂ ಮಾಜ್ ಎನ್ನುವವನ್ನು ಪೊಲೀಸರು ಬಂಧಿಸಿದ್ದಾರೆ.
ಶಂಕಿತರು ರಾಜ್ಯದ ಹಲವು ಕಡೆ ಬಾಂಬ್ ಬ್ಲಾಸ್ಟ್ ಮಾಡೋದಕ್ಕೆ ಪ್ಲ್ಯಾನ್ ಮಾಡ್ತಿದ್ದರು. ಮೂವರು ಶಂಕಿತ ಎ1 ಆರೋಪಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶಾರಿಖ್, ಎ-2 ಮಂಗಳೂರು ಮೂಲದ ಮಾಸ್, ಎಲೆಕ್ಟ್ರಿಕ್ ಇಂಜಿನಿಯರ್ ಆಗಿದ್ದ, ಜತೆಗೆ ಶಿವಮೊಗ್ಗ ಸಿದ್ದೇಶ್ವರ ನಗರದ ಎ-3 ಆರೋಪಿ ಯಾಸಿನ್ ಎಂದು ಗುರುತಿಸಲಾಗಿದೆ.
ಮೂರನೇ ಆರೋಪಿ ಯಾಸಿನ್ ಐಸಿಎಸ್ ಉಗ್ರ ನೇರ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಶರೀಖ್ ಎಂಬ ಶಂಕಿತ ಉಗ್ರನಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.