ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಜೀವ ಬೆದರಿಕೆ ಪತ್ರ ಬಂದಿದೆ.ಅವರ ಆಪ್ತ ಸಹಾಯಕ ಈ ಕುರಿತಾಗಿ ಜಿಲ್ಲಾ ಪೊಲೀಸರಿಗೆ ದೂರು ನೀಡಿದ್ದಾರೆ.
ಪತ್ರದಲ್ಲಿ ಸ್ವಾತಂತ್ರ್ಯಕ್ಕೆ ಹೋರಾಡಿದ ಟಿಪ್ಪು ಸುಲ್ತಾನ್ ಬಗ್ಗೆ ನೀನು ಮುಸ್ಲಿಂ ಗೂಂಡಾ ಎಂದು ಹೇಳಿದೆಯಲ್ಲ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜು ಕಟ್ಟಡ ಕಟ್ಟಲು ನಮ್ಮ ಮುಸ್ಲಿಂ ಸಿಮೆಂಟ್ ಬೇಕು. ಆದರೆ, ಮುಸ್ಲಿಂ ಸಮುದಾಯ ಬೇಡ, ನಾಚಿಕೆಯಾಗಬೇಕು. ನಾಲಿಗೆ ಕಟ್ ಮಾಡುತ್ತೇವೆ. ಹುಷಾರ್, ಬಾಲ ಬಿಚ್ಚಬೇಡ ಎಂದು ಪತ್ರದಲ್ಲಿ ಬೆದರಿಕೆ ಬರೆಯಲಾಗಿದೆ.
ಇನ್ನು ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ. ನಾನು ಎಲ್ಲಾ ಮುಸ್ಲಿಂ ಸಮುದಾಯದವರನ್ನು ಬೈದಿಲ್ಲ. ಹರ್ಷ, ಪ್ರವೀಣ್ ನೆಟ್ಟಾರು, ಪ್ರೇಮ್ ಸಿಂಗ್ ಅವರ ಮೇಲೆ ದಾಳಿ ಮಾಡಿದವರು ಮುಸ್ಲಿಂ ಗೂಂಡಾಗಳು ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.