spot_img
spot_img
spot_img
spot_img
spot_img
spot_img
spot_img
spot_img
spot_img
20.4 C
Belagavi
Sunday, September 24, 2023
spot_img

ದೇಶದ ಅಖಂಡತೆ ಸಾರುವ ರಾಷ್ಟ್ರಧ್ವಜ : ವಿಶೇಷತೆ ಹೀಗಿದೆ

ವಿಶೇಷ ವರದಿ : ರತ್ನಾಕರ ಗೌಂಡಿ

ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು ಆಗಸ್ಟ್ 13 ರಿಂದ 15 ರವರೆಗೆ ಹರ ಘರ್ ತಿರಂಗಾ ಅಭಿಯಾನವನ್ನು ಪ್ರಾರಂಭ ಮಾಡಿದ್ದು, ಅದರ ಅಂಗವಾಗಿ ಸರ್ಕಾರಿ ಯಂತ್ರನ ಮತ್ತು ಸಾರ್ವಜನಿಕರು ಹರ ಘರ್ ತಿರಂಗದ ಅಭಿಯಾನದ ತಯಾರಿಯನ್ನು ಪ್ರಾರಂಭಿಸಿದ್ದಾರೆ .

75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಆಚರಣೆಯ ಶುಭ ಸಂದರ್ಭದಲ್ಲಿ ರಾಷ್ಟ್ರ ಧ್ವಜ ದೇಶದ ಪ್ರತಿಯೊಂದು ಮನೆ ಪ್ರತಿಯೊಂದು ಕಚೇರಿ ಸಂಘ ಸಂಸ್ಥೆಗಳಲ್ಲಿ ನಮ್ಮ ಹೆಮ್ಮೆಯ ರಾಷ್ಟ್ರಧ್ವಜ ಹಾರಾಡಲಿದೆ.

ರಾಷ್ಟ್ರಧ್ವಜ ನಮ್ಮ ಸ್ವಾತಂತ್ರದ ಭಾರತದ ಸಂಕೇತವಾಗಿದೆ ದೇಶದ ಮೊದಲನೇ ಪ್ರಧಾನಿ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಧ್ವಜದ ಕುರಿತು ಈ ರೀತಿ ಹೇಳುತ್ತಾರೆ. ರಾಷ್ಟ್ರಧ್ವಜ ನಮ್ಮ ಸ್ವತಂತ್ರದ ಮಾತ್ರವಲ್ಲ ಅದು ದೇಶದ ಎಲ್ಲಾ ಜನರ ಸ್ವತಂತ್ರದ ಸಂಕೇತವಾಗಿದೆ.

ರಾಷ್ಟ್ರಧ್ವಜ ವಿಶ್ವದಲ್ಲಿಯೇ ವಿಶೇಷವಾಗಿ ರೂಪಗೊಂಡಿರುವ ನಮ್ಮ ಬಾವುಟ .ನಮ್ಮ ಧ್ವಜ ನಮ್ಮಿಂದ ಒಮ್ಮೆಲೇ ರೂಪಗೊಂಡಿರುವಂತ ಧ್ವಜವಲ್ಲ, ಇದು ಸ್ವತಂತ್ರ ಪೂರ್ವದ 1906 ರಲ್ಲಿ ಧ್ವಜದ ಕಲ್ಪನೆ ಹುಟ್ಟಿತ್ತು. ಅಲ್ಲಿಂದ 1947ರವರೆಗೆ ಹಲವಾರು ಬದಲಾವಣೆಗಳನ್ನು ನಮ್ಮ ರಾಷ್ಟ್ರ ಧ್ವಜ ಕಂಡಿತು.

1947 ರಲ್ಲಿ ಅರ್ಥಪೂರ್ಣವಾಗಿ ಪರಿಪೂರ್ಣವಾಗಿ ಮೂರು ಬಣ್ಣಗಳ ಹೊಂದಿ ಮಧ್ಯದಲ್ಲಿ ಅಶೋಕ ಚಕ್ರ ದೊಂದಿಗೆ ರೂಪುಗೊಂಡಿತು. ಇದರ ವಿನ್ಯಾಸವನ್ನು ಸ್ವತಂತ್ರ ಹೋರಾಟಗಾರರಾದ ಆಂಧ್ರದ ಪಿಂಗಳಿ ವೆಂಕಯ್ಯ ಅವರು 1916 ರಿಂದ 1921ರ ತನಕ ಹಲವು ರಾಷ್ಟ್ರಗಳ ಧ್ವಜದ ಅಧ್ಯಯನ ನಡೆಸಿ 30 ಧ್ವಜಗಳ ಮಾದರಿಯನ್ನು ಬುಕ್ಲೆಟ್ ರೂಪದಲ್ಲಿ ನೀಡಿದರು.

ಭಾರತದ ರಾಷ್ಟ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ- 22 – 1947 ಕನ್ಸಿವಟ್ಯಯೆಂಟ್ ಅಸ್ಸಂಬ್ಲಿ ಸಭೆಯಲ್ಲಿ ಅಂಗೀಕರಿಸಿಲಾಯತು. ಪಂಡಿತ್ ಜವಾಹರ್ ಲಾಲ್ ನೆಹರು ಅವರ ಮುಂದಾಳತ್ವದಲ್ಲಿ 1947 ಜುಲೈ 22ರಂದು ಅಸೆಂಬ್ಲಿಯಲ್ಲಿ ರಾಷ್ಟ್ರಧ್ವಜಕ್ಕೆ ಅಂತಿಮ ಸ್ಪರ್ಶ ನೀಡಿ ಅಧಿಕೃತ ಘೋಷಣೆ ಮಾಡಲಾಯಿತು.

1951 ಜನವರಿ 26ರ ತನಕ ಸ್ವತಂತ್ರ ಭಾರತದ ಸ್ವರಾಜ್ಯದ ಬಾವುಟವಾಗಿ ನಂತರದ ದಿನಗಳಲ್ಲಿ ಗಣರಾಜ್ಯ ಭಾರತದ ಬಾವುಟವಾಯಿತು ಆಗಸ್ಟ್ 31 ಮೊದಲು ಬಾರಿಗೆ ಧ್ವಜಾರೋಹನ ಮಾಡಲಾಯಿತು. ಆ ದಿನವನ್ನು ದ್ವಜ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಭಾರತದ ರಾಷ್ಟ್ರಧ್ವಜದ ಸಂಹಿತೆಯ ಪ್ರಕಾರ ಅಗಲ ಎತ್ತರ ಅನುಪಾತ 32 ಕೇಸರಿ ಬಿಳಿ ಮತ್ತು ಹಸಿರು ಧ್ವಜದ ಎಲ್ಲಾ ಮೂರು & ಬ್ಯಾಂಡ್ ಗಳು ಸಮಾನ ಗಾತ್ರದ ಇರುತ್ತದೆ. ಇನ್ನು ಅಶೋಕ್ ಚಕ್ರ 24 ಸಮಂತರದಲ್ಲಿ ಇರುವ ಕಡ್ಡಿಗಳನ್ನು ಹೊಂದಿದೆ.

ರಾಷ್ಟ್ರಧ್ವಜವು ಶುದ್ಧವಾದ ಖಾದಿ ಬಟ್ಟೆಯಿಂದಲೇ ಮಾಡಲಪಟ್ಟಿರಬೇಕು. ಅಥವಾ ಕೈಮಗ್ಗದ ನೂಲಿನಿಂದಲೇ ತಯಾರಾಗುವಂತ ಬಟ್ಟೆಯಿಂದ ರಾಷ್ಟ್ರಧ್ವಜವನ್ನು ತಯಾರಿಸಬೇಕು.

ಇನ್ನು ರಾಷ್ಟ್ರಧ್ವಜ ತಯಾರಿಕೆ ಹಕ್ಕು ನಮ್ಮ ರಾಜ್ಯದ ಧಾರವಾಡ ಜಿಲ್ಲೆಯ ಗರಗ್ ಗ್ರಾಮದ ತಯಾರಿಸಲಾಗುತ್ತದೆ ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಇಂತಹ ಘಟಕಗಳು ಧ್ವಜ ತಯಾರಿಕೆಯಲ್ಲಿ ತೊಡಗಿವೆ.

ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಭಾರತೀಯ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬೇರೆ ನಿಯಮಗಳ ತಕ್ಕಂತೆ ಉತ್ಪಾದಿಸದಿದರೇ ತಿರಸ್ಕೃತಗೊಳಿಸಲಾಗುತ್ತದೆ.

ರಾಷ್ಟ್ರಧ್ವಜ ಮತ್ತು ಲಾಂಛನಗಳ ಮತ್ತು ಹೆಸರುಗಳನ್ನು ಅನುಚಿತವಾಗಿ ಬಳಕೆಯನ್ನು ತಡೆಗಟ್ಟುವಿಕೆ ಕಾಯ್ದೆ 1950 ಮತ್ತು ರಾಷ್ಟ್ರೀಯ ಗೌರವ ಕಾಯ್ದೆ – 1971ರ ನಿಬಂಧನೆಗಳನ್ನು ಉಲ್ಲಂಘನೆ ಮಾಡಿದಲ್ಲಿ ಮೂರು ವರ್ಷ ಜೈಲು ಅಥವಾ ದಂಡು ಅಥವಾ ಎರಡು ಶಿಕ್ಷಾಹಾರ ಅಪರಾಧವಾಗಿದೆ.

ಭಾರತ ಧ್ವಜ ಸಂಹಿತೆ ಮತ್ತು 1971ರ ರಾಷ್ಟ್ರೀಯ ಗೌರವ ಅವಮಾನಗಳ ತಡೆ ಕಾಯ್ದೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಾಷ್ಟ್ರದ ಧ್ವಜ ಪ್ರದರ್ಶನ ಹಾರಾಟ ಮತ್ತು ಬಳಕೆ ಮಾಡಬೇಕೆಂದು ಕೇಂದ್ರ ಸಚಿವಾಲಯಗಳಿಗೆ ಇಲಾಖೆಗಳ ಕಾರ್ಯದರ್ಶಿಗಳಾದ ಕೇಂದ್ರ ಗ್ರಹ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಒಟ್ಟಿನಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಧ್ವಜದ ವಿಶೇಷತೆ ಸಾರಲು ಕೇಂದ್ರ ಸರ್ಕಾರ ಹೊರಟಿದೆ.

Related News

ರೈತರ ಹೋರಾಟಕ್ಕೆ ಸಾಂಕೇತಿಕವಾಗಿ ಬೆಂಬಲ ಸೂಚಿಸಲು ಹೊರಟಿದ್ದೇನೆ -ಹೆಚ್​ಡಿಕೆ

ಬೆಂಗಳೂರಿಗೆ ಆಗಮಿಸಿದ ಹೆಚ್​ಡಿ ಕುಮಾರಸ್ವಾಮಿ ಅವರು ಕೇಂಪೇಗೌಡ ಏರ್ಪೋರ್ಟ್ ನಲ್ಲಿ ಮಾತನಾಡಿದರು. ಈ ವೇಳೆ, ಅಮಿತ್ ಷಾ ಹಾಗೂ ನಡ್ಡಾ ಜೊತೆ ನಡೆದ ಚರ್ಚೆಗಳ ಬಗ್ಗೆ ದೆಹಲಿಯಲ್ಲಿ ಹೇಳಿದ್ದೇನೆ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ...

9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ

ಬೆಂಗಳೂರು: 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. 9ನೇ ತರಗತಿ ಮಕ್ಕಳ ಕಲಿಕಾ ದೃಷ್ಟಿಯಿಂದ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ನಡೆಸಲು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -