ಬೆಳಗಾವಿ: ತಮ್ಮ ಜನ್ಮದಿನ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಮಂಡಿಯೂರಿ ಕ್ಷಮೆಯಾಚಿಸಿದ ಘಟನೆ ನಡೆದಿದೆ.
ಜನ್ಮದಿನ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಂಜಯ್ ಪಾಟೀಲ್, 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲಬೇಕು.
10 ವರ್ಷದಲ್ಲಿ ಶಾಸಕನಾದಾಗ ಏನಾದರೂ ತಪ್ಪು ಮಾಡಿದರೆ ನನ್ನ ಕ್ಷಮಿಸಿ, ಮಂಡಿಯೂರಿ ನಿಮ್ಮ ಕ್ಷಮೆ ಕೇಳುವೆ ನನ್ನ ಕ್ಷಮಿಸಿ ಎಂದು ವೇದಿಕೆ ಮೇಲೆ ಮಂಡಿಯೂರಿ ಕ್ಷಮೆಯಾಚಿಸಿದರು.
ಶಾಸಕನಾಗಿದ್ದಾಗ ನಾನು ತಪ್ಪು ಮಾಡಿದ್ದರೆ ಕ್ಷಮೆ ಕೇಳುವೆ, ಆದರೆ ಪ್ರಧಾನಿ ನರೇಂದ್ರ ಮೋದಿಗೆ ಶಿಕ್ಷೆ ಕೊಡಬೇಡಿ, ಹಿಂದು ಸಂಸ್ಕೃತಿ ರಕ್ಷಿಸುವ ಮೋದಿ ಕೈ ಬಲಹೀನ ಮಾಡಬೇಡಿ. ಸಂಜಯ್ ಪಾಟೀಲ್‌ಗೆ ಶಿಕ್ಷೆ ನೀಡಬೇಕಂದರೆ ಕಪಾಳಮೋಕ್ಷ ಮಾಡಿ ನಡೆಯುತ್ತದೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಿ. ಯಾರಿಗೆ ಟಿಕೆಟ್ ಸಿಗುತ್ತದೆಯೋ ನನಗೆ ಗೊತ್ತಿಲ್ಲ. ದೇವರ ಮೇಲೆ ನನಗೆ ವಿಶ್ವಾಸ ಇದೆ. ದೇವರ ಆಶೀರ್ವಾದದಿಂದ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದರು.
ನನ್ನ ಹುಟ್ಟುಹಬ್ಬ ಅಂತಾ ಹೇಳಿ ಗಿಫ್ಟ್ ಕೊಡಬೇಕು ಅಂತಾ ಬಯಸಿದ್ದೇನೆ. ಯಾರಿಗೆ ಸಿಕ್ಕಿಲ್ಕ ಅವರಿಗೆ ಮುಟ್ಟಿಸುತ್ತೇನೆ. ಅಕೆ ಏನರೇ ಕೊಟ್ಟರೂ ನಾನು ಅದರ ಎರಡು ಪಟ್ಟು ಕೊಡುವವ. ಏನೇ ಆದರೂ ಆ ಕಡೆ ಹೋಗಬೇಡಿ ಎಂಬುದೊಂದೇ ನನ್ನ ವಿನಂತಿಯಾಗಿದೆ ಎಂದು ಹೇಳುವ ಮೂಲಕ ಮತದಾರರಿಗೆ ಬಹಿರಂಗ ಆಮೀಷವೊಡ್ಡಿದರು.